Friday, 22nd November 2024

ಓಮೈಕ್ರಾನ್ ನ ಉಪತಳಿ ಬಿಎಫ್.7 ಸೋಂಕು: ನಾಲ್ಕು ಪ್ರಕರಣ ಪತ್ತೆ

ನವದೆಹಲಿ: ದೇಶದಲ್ಲಿ ಕರೋನಾ ವೈರಸ್ ಓಮೈಕ್ರಾನ್ ನ ಉಪತಳಿ ಬಿಎಫ್.7 ಸೋಂಕಿನ ನಾಲ್ಕು ಪ್ರಕರಣಗಳು ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ ನಲ್ಲಿ ಪತ್ತೆ ಯಾಗಿವೆ ಎಂದು ಮೂಲಗಳು ತಿಳಿಸಿದೆ.

ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಗುಜರಾತ್ ಬಯೋಟೆಕ್ನಾಲಜಿ ಸಂಶೋ ಧನಾ ಕೇಂದ್ರವು ಈ ಪ್ರಕರಣಗಳನ್ನು ಪತ್ತೆ ಮಾಡಿತು. ಎರಡು ಮತ್ತು ಮೂರನೇ ಪ್ರಕರಣವೂ ಗುಜರಾತ್ ನಲ್ಲಿ ಪತ್ತೆಯಾಗಿದ್ದರೆ, ಮತ್ತೊಂದು ಪ್ರಕರಣ ಒಡಿಶಾದಲ್ಲಿ ವರದಿ ಯಾಗಿದೆ ಎನ್ನಲಾಗಿದೆ.

ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗಿರುವುದಕ್ಕೆ ವೈರಸ್ ನ ಈ ಬಿಎಫ್.7 ಉಪತಳಿ ಯೇ ಕಾರಣ ಎಂದು ಮೂಲಗಳು ತಿಳಿಸಿದೆ.