ಲಕ್ನೋ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ವೇಳೆ, ಗಲಭೆ ಸೃಷ್ಟಿಸಲು ಸಂಚು ರೂಪಿಸಿ ತಲೆಮರೆಸಿ ಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಬಿಹಾರದ ಫುಲ್ವಾರಿ ಷರೀಫ್‍ನಲ್ಲಿ ಪ್ರಕರಣ ದಾಖಲಾದ ತಕ್ಷಣ ದರ್ಭಾಂಗದ ನಿವಾಸಿ ನೂರುದ್ದೀನ್ ಜಂಗಿ ಅಲಿಯಾಸ್ ಅಡ್ವೊಕೇಟ್ ನೂರುದ್ದೀನ್ ನನ್ನು ಬಂಧಿಸಲು ಪಾಟ್ನಾದ ಹಿರಿಯ ಪೊಲೀಸ್ ಮಂದಾಗಿದ್ದರು. ಆದರೆ ಆತ ಪರಾರಿಯಾಗಿದ್ದ. ಕಳೆದ ರಾತ್ರಿ ಲಕ್ನೋದ ಆಲಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಮೆಟ್ರೋ ನಿಲ್ದಾಣದ ಬಳಿ ಉತ್ತರ ಪ್ರದೇಶ ಎಟಿಎಸ್ ಪಡೆಗೆ ಸಿಕ್ಕಿಬಿದ್ದಿದ್ದಾನೆ.
ಜಂಗಿ ಮತ್ತು ಅವರ ಸಹಚರರು ಬಿಹಾರದಲ್ಲಿ ಪ್ರಧಾನಿ ಮೋದಿಯವರ ನಿಗದಿತ ರ್ಯಾಲಿಗಳಲ್ಲಿ ಗಲಭೆ ಸೃಷ್ಟಿಸಲು ಯೋಜಿಸಿದ್ದರು. ಆರೋಪಿಯು 2015ರಲ್ಲಿ ಪಿಎಫಐ ದರ್ಭಾಂಗ ಜಿಲ್ಲಾಧ್ಯಕ್ಷರ ಸಂಪರ್ಕಕ್ಕೆ ಬಂದಿದ್ದು, ಅಂದಿನಿಂದಲೂ ಸಂಘಟನೆ ಯೊಂದಿಗೆ ಸಂಪರ್ಕ ಹೊಂದಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಜಂಗಿ 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದರ್ಭಾಂಗಾ ಕ್ಷೇತ್ರದಿಂದ ಸ್ರ್ಪಧಿಸಿ ಸೋಲು ಕಂಡಿದ್ದ ಲಕ್ನೋದಲ್ಲಿ ಎಟಿಎಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಕೆಲವೇ ಕಾನೂನು ಪ್ರಕ್ರಿಯೆ ನಂತರ ಯುಪಿ ಪೊಲೀಸರಿಗೆ ಒಪ್ಪಿಸಲಿದ್ದಾರೆ.