ನವದೆಹಲಿ: ಸೆಪ್ಟೆಂಬರ್ 2020ರ ಬಳಿಕ ಟೆಸ್ಲಾ ಇದೇ ಮೊದಲ ಬಾರಿಗೆ ಅತಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಟೆಸ್ಲಾ ಮೌಲ್ಯದಲ್ಲಿನ ಕುಸಿತವು ಶನಿವಾರ ಮಸ್ಕ್ ಮಾಡಿದ ಟ್ವೀಟ್ ಕಾರಣವಾಗಿದೆ.
ಎಲಾನ್ ಮಸ್ಕ್ ಬಿಟ್ ಕಾಯಿನ್ಗಳ ಬೆಲೆ 58 ಸಾವಿರ ಡಾಲರ್ಗೆ ಏರಿಕೆ ಕಂಡಿತ್ತು. ಆದರೆ ಅವರ ಒಂದು ಟ್ವೀಟ್ನಿಂದಾಗಿ ಈ ಬಿಟ್ ಕಾಯಿನ್ ಬೆಲೆ 50 ಸಾವಿರ ಡಾಲರ್ಗೆ ಕುಸಿತ ಕಂಡಿದೆ. ಮಸ್ಕ್, ಬಿಟ್ಕಾಯಿನ್ ಬೆಲೆ ಹೆಚ್ಚಿದೆ ಎಂದು ಹೇಳುತ್ತಿದ್ದಂತೆಯೇ ಸೋಮವಾರ ಟೆಸ್ಲಾದ ಷೇರುಗಳು ಕುಸಿತ ಕಂಡಿದೆ.
ಈ ಮೂಲಕ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಬ್ಲೂಮ್ಬರ್ಗ್ನ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈಗ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.