Wednesday, 23rd October 2024

OTT Release: ಆಕ್ಷನ್, ಥ್ರಿಲ್ಲರ್ ಸೇರಿದಂತೆ ದೀಪಾವಳಿಯೊಳಗೆ ಒಟಿಟಿಗೆ ಬರಲಿವೆ ಹಲವು ಸಿನಿಮಾ, ವೆಬ್ ಸರಣಿ!

OTT Release

ಚಿಂತನೆಗೆ ಪ್ರೇರೇಪಿಸುವ, ಆಕ್ಷನ್‌ನಿಂದ (action) ರಂಜಿಸಲಿರುವ, ಥ್ರಿಲ್ಲರ್‌ನಿಂದ (thriller) ಕೂಡಿರುವ ಸರಣಿ (web series) ಮತ್ತು ಚಿತ್ರಗಳು (Movie) ಅಕ್ಟೋಬರ್ ದ್ವಿತೀಯಾರ್ಧದಲ್ಲಿ ಒಟಿಟಿ ವೇದಿಕೆಗೆ (OTT Release) ಕಾಲಿಡಲು ಸಜ್ಜಾಗಿದೆ. 1000 ಬೇಬಿಸ್, ಲಬ್ಬರ್ ಪಾಂಡು ಸೇರಿದಂತೆ ಹಲವು ಸಿನಿಮಾಗಳು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸೇರಿದಂತೆ ಹಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ (OTT Release) ಬಿಡುಗಡೆಯಾಗಲಿದೆ.

ಸ್ನೇಕ್ಸ್ ಆಂಡ್ ಲ್ಯಾಡರ್ಸ್

ತಮಿಳು ವೆಬ್ ಸರಣಿ ʼಸ್ನೇಕ್ಸ್ ಅಂಡ್ ಲ್ಯಾಡರ್ಸ್ʼ ಅಕ್ಟೋಬರ್ 18ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಅಪಘಾತವನ್ನು ಮುಚ್ಚಿಟ್ಟು ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಳ್ಳುವ ನಾಲ್ಕು ಮಕ್ಕಳ ಕಥೆಯನ್ನು ಇದು ಒಳಗೊಂಡಿದೆ. ಕಾನೂನು ಮತ್ತು ಅಪರಾಧಿಗಳಿಂದ ಬೆದರಿಕೆಗಳನ್ನು ಎದುರಿಸುವ ಮಕ್ಕಳ ಕಥೆಯಲ್ಲಿ ನವೀನ್ ಚಂದ್ರ, ಸೃಂದಾ ಮತ್ತು ಮನೋಜ್ ಭಾರತಿರಾಜ ನಟಿಸಿದ್ದಾರೆ. ತೆಲುಗು, ಮಲಯಾಳಂ, ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಇದು ಲಭ್ಯವಿರುತ್ತದೆ.

1000 ಬೇಬಿಸ್

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಅಕ್ಟೋಬರ್ 18ರಂದು ಬಿಡುಗಡೆಯಾಗಲಿರುವ 1000 ಬೇಬಿಸ್ ಎಂಬುದು ಮಲಯಾಳಂ ಅಪರಾಧ ಲೋಕದ ಕಥೆಯಾಗಿದೆ. ರಹಸ್ಯ, ಅಪಾಯಕಾರಿಯಾದ ಆಟಗಳ ಮೂಲಕ ತನ್ನ ಸುತ್ತಲಿನವರ ಜೀವನದ ಮೇಲೆ ಪ್ರಭಾವ ಬೀರುವ ವ್ಯಕ್ತಿಯ ನಿಗೂಢ ಜೀವನವನ್ನು ಇದು ಆಧರಿಸಿದೆ. ನೀನಾ ಗುಪ್ತಾ, ಅಶ್ವಿನ್ ಕುಮಾರ್ ಮತ್ತು ಆದಿಲ್ ಇಬ್ರಾಹಿಂ ನಟಿಸಿರುವ ಚಿತ್ರದ ಟ್ರೇಲರ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಅನಿರೀಕ್ಷಿತ ತಿರುವುಗಳ ಮೂಲಕ ಈ ಸರಣಿಯು ಸಸ್ಪೆನ್ಸ್ ಮತ್ತು ಭಾವನಾತ್ಮಕ ಕಥೆಯನ್ನು ಒಳಗೊಂಡಿದೆ.

ಸೋಲ್ ಸ್ಟೋರಿಸ್

ಮನೋರಮಾ ಮ್ಯಾಕ್ಸ್ ನಲ್ಲಿ ಅಕ್ಟೋಬರ್ 18ರಂದು ಬಿಡುಗಡೆಯಾಗುವ ಸೋಲ್ ಸ್ಟೋರಿಸ್ ಹೆಚ್ಚು ಚಿಂತನೆಗೆ ಪ್ರೇರೇಪಿಸುವ ಕಥೆಯ ಹಂದರವನ್ನು ಒಳಗೊಂಡಿದೆ. ವಿಶೇಷವಾಗಿ ಇದು ಮಹಿಳೆಯರ ಸುತ್ತ ಸುತ್ತುತ್ತದೆ. ಗೋಪಿಕಾ ಮಂಜುಷಾ, ಸುಹಾಸಿನಿ ಮತ್ತು ಅನಾರ್ಕಲಿ ಮರಿಕರ್ ಒಳಗೊಂಡಿರುವ ತಾರಾಬಳಗದೊಂದಿಗೆ ಈ ಸರಣಿಯು ಪ್ರೇಕ್ಷಕರನ್ನು ಚಿಂತನೆಗೆ ಪ್ರೇರೇಪಿಸುತ್ತದೆ.

ಲಬ್ಬರ್ ಪಾಂಡು

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಅಕ್ಟೋಬರ್ 18ರಂದು ಲಬ್ಬರ್ ಪಾಂಡು ತಮಿಳು ಚಿತ್ರ ಬಿಡುಗಡೆಯಾಗಲಿದ್ದು, ಇದು ಗ್ರಾಮೀಣ ಕ್ರಿಕೆಟಿಗರಿಬ್ಬರ ನಡುವಿಂದ ಪೈಪೋಟಿಯನ್ನು ಎತ್ತಿ ತೋರಿಸುತ್ತದೆ. ವೈಯಕ್ತಿಕ, ವೃತ್ತಿಪರ ಸವಾಲುಗಳು, ಕೌಶಲ್ಯ ಮತ್ತು ಭಾವನೆಗಳ ಸುತ್ತ ಕಥೆ ಹೆಣೆಯಲಾಗಿದೆ. ತಮಿಳರಸನ್ ಪಚ್ಚಮುತ್ತು ನಿರ್ದೇಶನದ ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಸ್ವಾಸಿಕಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಕೊಂಡಲ್

ನೆಟ್‌ಫ್ಲಿಕ್ಸ್ ನಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಕೊಂಡಲ್ ಮಲಯಾಳಂ ಚಲನಚಿತ್ರವು ಮುನಂಬಮ್ ಬಂದರಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಯುವಕನ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಶಬೀರ್ ಕಲ್ಲರಕ್ಕಲ್ ಮತ್ತು ಆಂಟೋನಿ ವರ್ಗೀಸ್ ನಟಿಸಿದ್ದು, ಕೊಂಡಲ್ ನಾಯಕ ಎದುರಿಸುತ್ತಿರುವ ಹೋರಾಟಗಳ ಬಗ್ಗೆ ಚಿತ್ರ ನಿರೂಪಿಸಿದೆ.

ಲೆವೆಲ್ ಕ್ರಾಸ್

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈಗಾಗಲೇ ತೆರೆ ಕಂಡಿರುವ ಲೆವೆಲ್ ಕ್ರಾಸ್ ಮಲಯಾಳಂ ಚಿತ್ರವಾಗಿದ್ದು, ಇದು ಆಧುನಿಕ ಹುಡುಗಿ ಮತ್ತು ಅಶಿಸ್ತಿನ ಪುರುಷನ ನಡುವಿನ ಅನಿರೀಕ್ಷಿತ ಸಂಪರ್ಕದ ಕಥೆಯನ್ನು ಹೇಳುತ್ತದೆ. ಆಸಿಫ್ ಅಲಿ ಮತ್ತು ಅಮಲಾ ಪೌಲ್ ಅವರ ಅಭಿನಯದ ರೊಮ್ಯಾಂಟಿಕ್ ಚಿತ್ರ ಇದಾಗಿದೆ.

ಷಣ್ಮುಖ

ಅಕ್ಟೋಬರ್ 27ರಂದು ಬಿಡುಗಡೆಯಾಗಲಿರುವ ತೆಲುಗು ಚಿತ್ರ ಷಣ್ಮುಖ ದಕ್ಷಿಣ ಭಾರತದ ದೇವಾಲಯದ ಸುತ್ತಲಿನ ನಿಗೂಢತೆಯ ಕಥೆಯನ್ನು ಒಳಗೊಂಡಿದೆ. ಷಣ್ಮುಗಂ ಸಪ್ಪಾನಿ ​​ನಿರ್ದೇಶನದ ಈ ಚಿತ್ರದಲ್ಲಿ ಆದಿ ಮತ್ತು ಅವಿಕಾ ಗೋರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಒಳಸಂಚುಗಳ ಕಥೆಯನ್ನು ಇದು ಒಳಗೊಂಡಿದೆ.

ಮೆಕ್ಯಾನಿಕ್ ರಾಕಿ

ಅಕ್ಟೋಬರ್ 31ರಂದು ಎಲ್ಲರನ್ನು ನಕ್ಕು ನಲಿಸಲು ತೆಲುಗಿನಲ್ಲಿ ಬರಲಿದ್ದಾನೆ ಮೆಕ್ಯಾನಿಕ್ ರಾಕಿ. ವಿಶ್ವಕ್ ಸೇನ್ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರವನ್ನು ರವಿತೇಜ ಮುಲ್ಲಪುಡಿ ಬರೆದು ನಿರ್ದೇಶಿಸಿದ್ದಾರೆ.

BBK 11 Fight: ಜಗದೀಶ್-ರಂಜಿತ್ ಮಧ್ಯೆ ನಡೆದ ಹೊಡೆದಾಟ ಇದುವೆ?: ವೈರಲ್ ಆಗುತ್ತಿದೆ ವಿಡಿಯೋ

ಅಮರನ್

ಅಕ್ಟೋಬರ್ 31ರಂದು ತೆರೆಗೆ ಬರಲಿರುವ ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಅಮರನ್ ತಮಿಳು ಭಾಷೆಯ ಯುದ್ಧದ ಕಥೆಯನ್ನು ಹೊಂದಿದೆ. ಸೇನಾ ಕಾರ್ಯಾಚರಣೆಯಲ್ಲಿ ಮಡಿದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಜೀವನದ ಬಗ್ಗೆ ಬರೆದಿರುವ ಈ ಚಿತ್ರವು ರಾಹುಲ್ ಸಿಂಗ್ ಮತ್ತು ಶಿವ್ ಆರೂರ್ ಅವರ ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್‌ನ ನಿಜ ಜೀವನದ ಮಿಲಿಟರಿ ಕಥೆಗಳಿಂದ ಪ್ರೇರಿತವಾಗಿದೆ. ಆಕ್ಷನ್ ಪ್ರಧಾನವಾಗಿರುವ ಈ ಚಿತ್ರ ಮಿಲಿಟರಿ ಕಥೆಯನ್ನು ಹೇಳುತ್ತದೆ.