Thursday, 9th January 2025

OYO Restriction: ಅವಿವಾಹಿತರಿಗೆ ಓಯೋ ಒಳಗೆ ನೋ ಎಂಟ್ರಿ; ಏನಿದು ಹೊಸ ನಿಯಮ?

ನವದೆಹಲಿ: ಪ್ರಮುಖ ಪ್ರಯಾಣ ಬುಕ್ಕಿಂಗ್ ಕಂಪನಿಯಾದ ಓಯೋ ಮೀರತ್‌ನಲ್ಲಿರುವ(Meerut) ಪಾಲುದಾರ ಹೋಟೆಲ್‌ಗಳಿಗಾಗಿ ತನ್ನ ಚೆಕ್-ಇನ್ ನೀತಿ ನಿಯಮಗಳನ್ನು ಪರಿಷ್ಕರಿಸುವಂತೆ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ. ಅವಿವಾಹಿತರು ಈಗ ಚೆಕ್-ಇನ್ ಮಾಡಿದ ಕೂಡಲೇ ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂಬುದನ್ನು ಕಡ್ಡಾಯಗೊಳಿಸಿದೆ. ಮೀರತ್‌ನಲ್ಲಿ ಈ ಹೊಸ ನಿಯಮ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ಬರಲಿದೆ ಎಂಬ ಮಾಹಿತಿಯಿದೆ(OYO Restriction)

ಈ ಹೊಸ ನಿಯಮವನ್ನು ಬಹು ಮುಖ್ಯವಾಗಿ ಅವಿವಾಹಿತರಿಗೆ ಜಾರಿಗೊಳಿಸಲಾಗಿದೆ. ಸುರಕ್ಷತೆ ಮತ್ತು ಭದ್ರತೆಗಾಗಿ OYO ಕಂಪನಿ ಈ ನಿರ್ಧಾರಕ್ಕೆ ಬಂದಿದೆ ಎಂಬ ಮಾಹಿತಿಯಿದೆ. ಕಂಪನಿಯು ತನ್ನ ಪಾಲುದಾರ ಹೋಟೆಲ್‌ಗಳಿಗೆ ಅಗತ್ಯವಿರುವ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ ಅವಿವಾಹಿತರಿಗೆ ಬುಕ್ಕಿಂಗ್‌ಗಳನ್ನು ನಿರಾಕರಿಸುವ ಅಧಿಕಾರವನ್ನು ನೀಡಿದೆ.

OYO ಈ ನಿಯಮ ತಕ್ಷಣವೇ ಜಾರಿಗೆ ಬರುವಂತೆ ಇದನ್ನು ಖಚಿತಪಡಿಸಿಕೊಳ್ಳಲು ಮೀರತ್‌ನಲ್ಲಿರುವ ತನ್ನ ಪಾಲುದಾರ ಹೋಟೆಲ್‌ಗಳಿಗೆ ನಿರ್ದೇಶನವನ್ನು ನೀಡಿದೆ. ಕಂಪನಿಯು ಇದನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸಬಹುದು ಎಂದು ನೀತಿ ಬದಲಾವಣೆಯ ಬಗ್ಗೆ ತಿಳಿದಿರುವ ನುರಿತರು ತಿಳಿಸಿದ್ದಾರೆ. “OYO ನಾಗರಿಕ ಸಮಾಜದ ಗುಂಪುಗಳಿಂದ ಅದರಲ್ಲೂ ವಿಶೇಷವಾಗಿ ಮೀರತ್‌ನಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮವನ್ನು ಒತ್ತಾಯಿಸುವ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ ಎನ್ನಲಾಗಿದೆ. ಹೆಚ್ಚುವರಿಯಾಗಿ, ಕೆಲವು ಇತರ ನಗರಗಳ ನಿವಾಸಿಗಳು ಅವಿವಾಹಿತ ದಂಪತಿಗಳಿಗೆ OYO ಹೋಟೆಲ್‌ಗಳಲ್ಲಿ ಚೆಕ್-ಇನ್ ಮಾಡಲು ಅವಕಾಶ ನೀಡದಂತೆ ಅರ್ಜಿ ಸಲ್ಲಿಸಿದ್ದಾರೆ” ಎಂದು ಕೆಲವರು ಹೇಳಿದ್ದಾರೆ.

OYO ನಾರ್ತ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು “OYO ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯವನ್ನು ನೀಡಲು ಸದಾ ಬದ್ಧವಾಗಿದೆ. ನಾವು ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಕಾನೂನು ನಿಯಮಗಳು ಕೂಡ ಮುಖ್ಯವಾಗುತ್ತವೆ. ನಾವು ಈ ಹೊಸ ನಿಯಮದ ಮೂಲಕ ಸುರಕ್ಷತೆ ಮತ್ತು ಭದ್ರತೆಗೆ ಒತ್ತನ್ನು ನೀಡುತ್ತೇವೆ” ಎಂದರು. ಇನ್ನು ಮುಂದೆ ವಿವಾಹಿತ ದಂಪತಿಗಳಿಗೆ ಮಾತ್ರ ಓಯೋಗೆ ಪ್ರವೇಶವಿದ್ದು,ಅವಿವಾಹಿತರಿಗೆ ಪ್ರವೇಶವಿಲ್ಲ.

ಈ ಸುದ್ದಿಯನ್ನೂ ಓದಿ: Priyanka Gandhi: ಗೆದ್ದರೆ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನುಣುಪಾಗಿಸುತ್ತೇನೆ; ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

Leave a Reply

Your email address will not be published. Required fields are marked *