ಒಡಿಶಾ: ಕರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಷರ ಸೇವೆಯ ಮೂಲಕ ಗುರ್ತಿಸಿಕೊಂಡಿದ್ದ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ನಂದಾ ಮಾಸ್ಟರ್ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಒಡಿಶಾದ ಜೈಪುರ ಜಿಲ್ಲೆಯ ಕಂಠೀರ ಗ್ರಾಮದಲ್ಲಿ ಜನಿಸಿದ್ದ ನಂದ ಕಿಶೋರ್ ಪ್ರಸ್ಟಿ, ಲಕ್ಷಾಂತರ ಬಡವರಿಗೆ ಅಕ್ಷರ ದಾನದ ಮೂಲಕ ನಂದಾ ಮಾಸ್ಟರ್ ಎಂಬುದಾಗಿಯೇ ಪ್ರಸಿದ್ಧಿ ಗಳಿಸಿದ್ದರು.
ಅಕ್ಷರ ಸೇವೆಯಲ್ಲಿಯೇ ತುಂಬು ಜೀವನ ಕಳೆದ ನಂದಾ ಸಾರ್ ನವೆಂಬರ್ 30ರಂದು ಕರೋನಾ ಪಾಸಿಟಿವ್ ಎಂಬುದಾಗಿ ದೃಢ ಪಟ್ಟಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇನ್ನಿಲ್ಲವಾಗಿದ್ದಾರೆ.