Friday, 13th December 2024

ಪಾಕಿಸ್ತಾನದ ಡ್ರೋನ್​ ಮೇಲೆ ಗುಂಡಿನ ದಾಳಿ

ಆರ್‌ಎಸ್‌ಪುರ ಸೆಕ್ಟರ್‌: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶನಿವಾರ ಆರ್‌ಎಸ್‌ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿ ಭಾಗವನ್ನು ಪ್ರವೇಶಿಸು ತ್ತಿದ್ದ ಪಾಕಿಸ್ತಾನದ ಡ್ರೋನ್​ ಮೇಲೆ ಗುಂಡಿನ ದಾಳಿ ನಡೆದಿದೆ.

ಆರ್‌ಎಸ್‌ ಪುರದ ಅರ್ನಿಯಾ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿ ಬಳಿ ಡ್ರೋನ್‌ವೊಂದನ್ನು ಸೈನಿಕರು ಪತ್ತೆ ಹಚ್ಚಿದ್ದರು. ಗಡಿ ದಾಟುತ್ತಿದ್ದ ಡ್ರೋನ್​ಗೆ ಏಳರಿಂದ ಎಂಟು ಸುತ್ತು ಗುಂಡು ಹಾರಿಸಲಾಗಿತ್ತು. ಬಳಿಕ ಡ್ರೋನ್ ಪಾಕಿಸ್ತಾನದ ಕಡೆಗೆ ಹಿಂದಿರುಗಿತು ಎಂದು ಬಿಎಸ್‌ಎಫ್ ಮೂಲ ಗಳು ತಿಳಿಸಿವೆ.