Friday, 10th January 2025

Palghar Blast: ಪರ್ಫ್ಯೂಮ್ ಬಾಟಲಿಗಳ ಎಕ್ಸ್ಪೈರಿ ಡೇಟ್ ಬದಲಿಸುವಾಗ ಸ್ಫೋಟ; ಅಪ್ರಾಪ್ತರಿಬ್ಬರು ಸೇರಿ ನಾಲ್ವರಿಗೆ ಗಾಯ!

ಮುಂಬೈ: ಮಹಾರಾಷ್ಟ್ರದ(Maharashtra) ಪಾಲ್ಘರ್ ಜಿಲ್ಲೆಯಲ್ಲಿ ಪರ್ಫ್ಯೂಮ್ ಬಾಟಲಿಗಳ(‌Perfume Bottle) ಎಕ್ಸ್ಪೈರಿ ದಿನಾಂಕವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದ ವೇಳೆ ಫ್ಲಾಟ್‌ವೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ(ಜ.10) ತಿಳಿಸಿದ್ದಾರೆ(Palghar Blast)

ಮುಂಬೈ ಹೊರವಲಯದಲ್ಲಿರುವ ನಲ್ಲ ಸೊಪಾರಾದಲ್ಲಿರುವ ರೋಶ್ನಿ ಅಪಾರ್ಟ್‌ಮೆಂಟ್‌ನ ಮನೆ ಸಂಖ್ಯೆ 112 ರಲ್ಲಿ ಗುರುವಾರ(ಜ.9) ತಡರಾತ್ರಿಯಲ್ಲಿ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಸಂತ್ರಸ್ತರನ್ನು ಮಹಾವೀರ್ ವಾದರ್ (41), ಸುನೀತಾ ವಾದರ್ (38), ಕುಮಾರ್ ಹರ್ಷವರ್ಧನ್ ವಾದರ್ (9) ಮತ್ತು ಕುಮಾರಿ ಹರ್ಷದಾ ವಾದರ್ (14) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಗಂಧ ದ್ರವ್ಯದ ಬಾಟಲಿಗಳ ಮುಕ್ತಾಯ ದಿನಾಂಕಗಳನ್ನು ಬದಲಾಯಿಸಲು ಪ್ರಯತ್ನಿಸುವ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕುಮಾರ್ ಹರ್ಷವರ್ಧನ್ ಅವರು ನಲ್ಲ ಸೊಪಾರಾದ ಲೈಫ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೂ ಮೂವರು ಅದೇ ಪ್ರದೇಶದ ಆಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯಿದೆ.

ಬಿಡದಿ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ

ಕೆಲ ದಿನಗಳ ಹಿಂದೆಯಷ್ಟೇ ಬಾಯ್ಲರ್‌ ಸ್ಫೋಟಗೊಂಡು ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Boiler Explosion) ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿತ್ತು. ಆರ್ಬಿಟ್ ಪವರ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟವಾಗಿದ್ದು, ಉತ್ತರ ಭಾರತದ ಮೂಲದ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದರು.

ಅಮ್ಮೇಶ್, ತರುಣ್, ಉಮೇಶ್, ಸಂತುನ್ ಹಾಗೂ ಲಖನ್‌ ಗಾಯಾಳುಗಳು. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿತ್ತು.ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸ್ಥಳಕ್ಕೆ ಬಿಡದಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ

ಪಟಾಕಿ ತಯಾರಿಸುತ್ತಿದ್ದ ಘಟಕದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಆರು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆಯೊಂದು ಶನಿವಾರ (ಜ.4) ತಮಿಳುನಾಡಿನಲ್ಲಿ(Tamil Nadu) ನಡೆದಿರುವುದಾಗಿ ವರದಿಯಾಗಿತ್ತು. ವರದಿಯ ಪ್ರಕಾರ, ಘಟನೆಯಲ್ಲಿ ಹಲವಾರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಕ್ಷಣವೇ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಸ್ಫೋಟಕ್ಕೆ ಕಾರಣ ಏನೆಂಬುದು ತಿಳಿದು ಬಂದಿರಲಿಲ್ಲ. ಪಟಾಕಿ ತಯಾರಿಸುವ ವೇಳೆ ರಾಸಾಯನಿಕ ಮಿಶ್ರಣದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನೂ ಓದಿ: Tumkur News: ಜಮೀನು ವಿವಾದ- ಕೊಲೆಗೆ ಸುಫಾರಿ ಕೊಟ್ಟ ಲೇಡಿ ಪೊಲೀಸ್‌… ಇದು ಖಾಕಿಯ ʻಕಿಲ್ಲಿಂಗ್‌ʼ ಪ್ಲ್ಯಾನ್‌!

Leave a Reply

Your email address will not be published. Required fields are marked *