ನವದೆಹಲಿ: ಈ ತಿಂಗಳ (ಡಿಸೆಂಬರ್) 31ರ ಒಳಗೆ ಎಲ್ಲ ಪ್ಯಾನ್ ಕಾರ್ಡ್‌ಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇನ್ನು ಎರಡು ದಿನಗಳಲ್ಲಿ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ರದ್ದಾಗಲಿದೆ. ಪ್ಯಾನ್ ಕಾರ್ಡ್ ರದ್ದಾದರೆ ಹಣಕಾಸಿನ ವಹಿವಾಟು ಮತ್ತು ತೆರಿಗೆ ಪಾವತಿಸುವ ವೇಳೆ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ (PAN Card Link).
ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿತ್ತು. ಸಾಕಷ್ಟೂ ಕಾಲಾವಕಾಶವನ್ನು ನೀಡಿತ್ತು. ಇದೀಗ ಗಡುವು ಮುಗಿಯುತ್ತಾ ಬರುತ್ತಿದ್ದು,ಮತ್ತೆ ದಿನಾಂಕ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ. ಎಲ್ಲರೂ ಕಡ್ಡಾಯವಾಗಿ ಈ ತಿಂಗಳ 31ರ ಒಳಗೆ ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿಸಿಕೊಳ್ಳಬೇಕಿದೆ.
ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಆಗದಿದ್ದರೆ, 2025ರ ಜನವರಿ 1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಕೂಡಲೇ ಲಿಂಕ್ ಮಾಡಬೇಕು. ಈ ಕುರಿತು ಕೇಂದ್ರ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆ ಪದೇ ಪದೇ ಸೂಚನೆ ನೀಡುತ್ತಿವೆ. ಹಣಕಾಸು ಕಾರ್ಯಗಳಿಗೆ ಸಂಬಂಧಿಸಿದಂತೆ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ ಕೆಲವು ಹಣಕಾಸು ಚಟುವಟಿಕೆಗಳನ್ನು ಮಾಡಲು ಸಾಧ್ಯವೇ ಇಲ್ಲ. ವಿಶೇಷವಾಗಿ ಐಟಿ ರಿಟರ್ನ್ ಫೈಲಿಂಗ್ ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದ ಯಾವುದೇ ಕೆಲಸಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕು.
ಪ್ಯಾನ್ – ಆಧಾರ್‌ಗೆ ಲಿಂಕ್ ಆಗದಿದ್ದರೆ ಏನಾಗಲಿದೆ?
ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಆದಾಯ ತೆರಿಗೆ ರಿಟರ್ನ್ ಸ್ವೀಕರಿಸುವುದಿಲ್ಲ. ಅಲ್ಲದೆ PAN ಕಾರ್ಡ್ ಅನ್ನು ಬಳಸಲು ಸಾಧ್ಯವಾಗದು. ಇದಲ್ಲದೆ ಇನ್ನೊಂದು ಹೊಸ PAN ಕಾರ್ಡ್ ಪಡೆಯಲೂ ಸಾಧ್ಯವಾಗುವುದಿಲ್ಲ. ರಿಟರ್ನ್ಸ್ ಸಲ್ಲಿಸುವಾಗ ಈ ಡಾಕ್ಯುಮೆಂಟ್ ಸಹ ಅಗತ್ಯವಿದೆ. ಪ್ಯಾನ್ ಕಾರ್ಡ್ ಇಲ್ಲದೆ ಇಂತಹ ಹಲವು ರೀತಿಯ ಕೆಲಸಗಳನ್ನು ಪೂರ್ಣಗೊಳಿಸಲಾಗುವುದಿಲ್ಲ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ?
- ಮೊದಲಿಗೆ, ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ಕ್ವಿಕ್ ಲಿಂಕ್ಸ್ ವಿಭಾಗದಲ್ಲಿ ಆಧಾರ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
- ಈಗ ಆಧಾರ್ ಸಂಖ್ಯೆ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
- ಮುಂದುವರೆದು PAN ಅನ್ನು ನಮೂದಿಸಿ ಮತ್ತು PAN ಮತ್ತು ಮೊಬೈಲ್ ಸಂಖ್ಯೆಯನ್ನು ದೃಢೀಕರಿಸುವುದು.
- OTP ಅನ್ನು ನಮೂದಿಸಿ ಮತ್ತು ಆದಾಯ ತೆರಿಗೆ ಫೈಲ್ ಪ್ರಕ್ರಿಯೆಯ ಮೇಲೆ ಕ್ಲಿಕ್ ಮಾಡಬೇಕು.
- ಇದರ ನಂತರ ಪಾವತಿಯ ವಿಧಾನವನ್ನು ನಮೂದಿಸಿ ಮತ್ತು ಮೌಲ್ಯಮಾಪನ ವರ್ಷವನ್ನು ನಮೂದಿಸಬೇಕು.
- ಪಾವತಿ ಮಾಡಿದ ನಂತರ, ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ:Bhojpuri Singer: ಬಿಜೆಪಿ ವೇದಿಕೆಯಲ್ಲಿ ರಘುಪತಿ ರಾಘವ ಹಾಡು… ಭೋಜ್‌ಪುರಿ ಗಾಯಕಿ ವಿರುದ್ಧ ಭಾರೀ ಅಕ್ರೋಶ; ಕ್ಷಮೆಗೆ ಆಗ್ರಹ