Wednesday, 13th November 2024

PAN Card Update: ಪಾನ್ ಕಾರ್ಡ್ ತಿದ್ದುಪಡಿಗೆ ಇಲ್ಲಿದೆ ಸುಲಭ ವಿಧಾನ

PAN Card Update

ಹಣಕಾಸು ವಹಿವಾಟುಗಳಿಗೆ ಪ್ರಮುಖ ದಾಖಲೆಯಾಗಿ ಬಳಸಲ್ಪಡುವ ಶಾಶ್ವತ ಖಾತೆ ಸಂಖ್ಯೆಯಾಗಿರುವ (Permanent Account Number) ಪಾನ್ ಕಾರ್ಡ್ ಆಧಾರ್‌ನಂತೆಯೇ (Aadhaar card) ಭಾರತೀಯ ನಾಗರಿಕರಿಗೆ ಪ್ರಮುಖ ದಾಖಲೆಯಾಗಿದೆ. ಕೇಂದ್ರ ಸರ್ಕಾರವು ಪಾನ್ ಕಾರ್ಡ್‌ಗಾಗಿ ಹಲವು ನಿಯಮಗಳನ್ನು ರೂಪಿಸಿದೆ.

ಇದರಲ್ಲಿರುವ ಪ್ರತಿಯೊಂದು ಮಾಹಿತಿಯೂ ಸರಿಯಾಗಿರಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳು ಎದುರಾಗುತ್ತದೆ.
ಪಾನ್ ಕಾರ್ಡ್‌ನಲ್ಲಿನ ಮಾಹಿತಿಯಲ್ಲಿ ಯಾವುದೇ ತಪ್ಪು ಇದ್ದರೆ ಅದನ್ನು ಕೆಲವು ಸುಲಭವಾದ ಪ್ರಕ್ರಿಯೆಯ ಮೂಲಕ ಸರಿಪಡಿಸಬಹುದು. ಇದನ್ನು ಆನ್‌ಲೈನ್ ಮೂಲಕವೂ ಅಥವಾ ಆಫ್‌ಲೈನ್ ಮೂಲಕವೂ ಮಾಡಬಹುದು.

ಪಾನ್ ಕಾರ್ಡ್ ಆದಾಯ ತೆರಿಗೆಯೊಂದಿಗೆ ಸಂಪರ್ಕ ಹೊಂದಿದೆ. ಹೀಗಾಗಿ ಕಾರ್ಡ್‌ನಲ್ಲಿರುವ ಪ್ರತಿಯೊಂದು ಮಾಹಿತಿಯು ಸರಿಯಾಗಿರಬೇಕು.

ಪಾನ್ ಕಾರ್ಡ್‌ನಲ್ಲಿನ ಯಾವುದೇ ತಪ್ಪುಗಳನ್ನು ಸರಿಪಡಿಸಲು ಆನ್‌ಲೈನ್ ಪ್ರಕ್ರಿಯೆಯು ಅತ್ಯಂತ ಸುಲಭ ವಿಧಾನವಾಗಿದೆ. ಯಾವುದೇ ಅಡಚಣೆಯಿಲ್ಲದೆ ಇದನ್ನು ಮಾಡಬಹುದು. ಆದರೆ ಹೆಚ್ಚಿನವರಿಗೆ ಈ ವಿಧಾನದ ಬಗ್ಗೆ ಸರಿಯಾಗಿ ತಿಳಿದಿಲ್ಲ.

PAN Card Update

ಆನ್‌ಲೈನ್‌ನಲ್ಲಿ ಸರಿಪಡಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಪಾನ್ ಕಾರ್ಡ್ ತಿದ್ದುಪಡಿಗಾಗಿ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ www.incometaxindia.gov.in ಗೆ ಭೇಟಿ ನೀಡಿ. ಪಾನ್ ಸಂಖ್ಯೆಯನ್ನು ನಮೂದಿಸಿ ಲಾಗ್ ಇನ್ ಮಾಡಿ.

ಅನಂತರ ಪಾನ್ ಕಾರ್ಡ್ ತಿದ್ದುಪಡಿಯ ಆಯ್ಕೆಯನ್ನು ಆರಿಸಿಕೊಳ್ಳಿ. ಪರದೆಯಲ್ಲಿ ಕಾಣುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಬಳಿಕ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

PAN Card New Rule: ಪಾನ್ ಕಾರ್ಡ್ ಅಪ್‌ಡೇಟ್‌ಗೆ ಯಾವಾಗ ಕೊನೆಯ ದಿನ? ಮಾಡದಿದ್ದರೆ ಆಗುವ ನಷ್ಟ ಏನು?

ಆಫ್‌ಲೈನ್ ತಿದ್ದುಪಡಿ ಹೇಗೆ?

ಆನ್‌ಲೈನ್ ತಿದ್ದುಪಡಿಯ ಬದಲಿಗೆ ಆಫ್‌ಲೈನ್ ತಿದ್ದುಪಡಿಯನ್ನು ಪಡೆಯಲು ಬಯಸಿದರೆ ಇದಕ್ಕಾಗಿ ಹತ್ತಿರದ ಪಾನ್ ಸೇವಾ ಕಚೇರಿಗೆ ಭೇಟಿ ನೀಡಿ. ಅಲ್ಲಿ ನೀಡುವ ಅರ್ಜಿಯನ್ನು ಭರ್ತಿ ಮಾಡಬೇಕು. ಬಳಿಕ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ. ಕೆಲವೇ ದಿನಗಳಲ್ಲಿ ತಿದ್ದುಪಡಿಯಾಗಿರುವ ಪಾನ್ ಕಾರ್ಡ್ ಅಂಚೆ ಮೂಲಕ ಮನೆಗೆ ತಲುಪುತ್ತದೆ.