ಪರಾಗ್ ಅಗರ್ವಾಲ್ ಅವರನ್ನು ಹಾಗೆಯೇ ಕಳುಹಿಸಿಕೊಡುವಂತಿಲ್ಲ. ಪರಿಹಾರದ ಮೊತ್ತವನ್ನು ನಿಡಬೇಕಿದೆ ಎಂದು ವರದಿ ಯೊಂದರಲ್ಲಿ ಉಲ್ಲೇಖವಾಗಿದೆ. ಇದರ ಪ್ರಕಾರ ಅಂದಾಜು 346 ಕೋಟಿ ರೂ. ಪರಿಹಾರವಾಗಿ ಪರಾಗ್ ಅಗರ್ವಾಲ್ ಪಡೆಯಲಿದ್ದಾರೆ. ಇದರಲ್ಲಿ ಮೂಲ ವೇತನ, ಈಕ್ವಿಟಿ ಅವಾರ್ಡ್ಗಳು ಸೇರಿರಲಿವೆ ಎಂದು ವರದಿ ಮಾಡಿದೆ.
ಟ್ವಿಟರ್ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದ ಅಗರ್ವಾಲ್ ಅವರಿಗೆ 2021ರ ಪರಿಹಾರವಾಗಿ 30.4 ದಶಲಕ್ಷ ಡಾಲರ್ (ಅಂದಾಜು 250 ಕೋಟಿ ರೂ.) ನೀಡಬೇಕಿದೆ. ಸಿಇಒ ಆಗಿ ಅಗರ್ವಾಲ್ ವೇತನ ವಾರ್ಷಿಕ 1 ದಶಲಕ್ಷ ಡಾಲರ್ (ಸುಮಾರು 8.24 ಕೋಟಿ ರೂ.) ಇದೆ ಎಂದು ವರದಿ ಉಲ್ಲೇಖಿಸಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಪರಾಗ್ ಅಗರ್ವಾಲ್ ಟ್ವಿಟರ್ ಮುಖ್ಯ ಕಾರ್ಯನಿರ್ವ ಹಣಾ ಅಧಿಕಾರಿಯಾಗಿ (ಸಿಇಒ) ಅಧಿಕಾರ ಸ್ವೀಕರಿಸಿದ್ದರು. ಅಗರವಾಲ್ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಟ್ವಿಟರ್ ಜತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಪರಿಹಾರ ಪಡೆಯಲು ಅವರು ಅರ್ಹ ರಾಗಿರುತ್ತಾರೆ. ಇದರಂತೆ, ಟ್ವಿಟರ್ನಿಂದ ಅವರಿಗೆ ಅಂದಾಜು 346 ಕೋಟಿ ರೂ. ಪರಿಹಾರ ದೊರೆಯಬೇಕಿದೆ.
ಉದ್ಯಮಿ ಎಲಾನ್ ಮಸ್ಕ್ ಅವರು ಸುಮಾರು 44 ಶತಕೋಟಿ ಡಾಲರ್ಗೆ ಟ್ವಿಟರ್ ಅನ್ನು ಖರೀದಿ ಮಾಡಿದ್ದಾರೆ. ಇದರ ಬೆನ್ನಲ್ಲೇ, ಸಿಇಒ ಪರಾಗ್ ಅಗರ್ವಾಲ್, ಟ್ವಿಟರ್ನ ಸಿಎಫ್ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ಮಸ್ಕ್ ವಜಾ ಮಾಡಿದ್ದರು.