ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 (Paris Paralympics 2024) ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳು ಸಾಹಸ ಮುಂದುವರಿಸಿದ್ದಾರೆ. ಬಿಲ್ಗಾರಿಕೆಯಲ್ಲಿ ಭಾರತದ ಅಥ್ಲೀಟ್ ಹರ್ವಿಂದರ್ ಸಿಂಗ್ ಫೈನಲ್‌ನಲ್ಲಿ ಅಗ್ರ ಸ್ಥಾನ ಪಡೆದು ಚಿನ್ನದ ಪದಕ ಸಾಧನೆ ಮಾಡಿದ್ದಾರೆ.
ಬುಧವಾರ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಫೈನಲ್ ಪಂದ್ಯದಲ್ಲಿ ಭಾರತದ ಹರ್ವಿಂದರ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂದರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದು ಭರವಸೆ ಮೂಡಿಸಿದ್ದ ಆರ್ಚರಿ ಅಥ್ಲೀಟ್ ಹರ್ವಿಂದರ್ ಸಿಂಗ್ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಈ ಮೂಲಕ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಆರ್ಚರಿಯಲ್ಲಿ ಮೊದಲ ಬಂಗಾರದ ಸಾಧನೆಯನ್ನು ಮಾಡಿದೆ. ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಹರ್ವಿಂದರ್ ಸಿಂಗ್, ಪೋಲೆಂಡ್‌ನ ಲುಕಾಸ್ ಸಿಸ್ಜೆಕ್ ಆಟಗಾರನನ್ನು ಸೋಲಿಸಿದರು. ಪದಕದ ಸುತ್ತಿನ ಪಂದ್ಯದಲ್ಲಿ ಹರ್ವಿಂದರ್ 28-24, 28-27, 29-25 ರಿಂದ ಪೋಲೆಂಡ್ ಆಟಗಾರನನ್ನು ಮಣಿಸಿ, 6-0ಯಿಂದ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
A very special Gold in Para Archery!
— Narendra Modi (@narendramodi) September 4, 2024
Congratulations to Harvinder Singh for winning the Gold medal in the Men's Individual Recurve Open at the #Paralympics2024!
His precision, focus and unwavering spirit are outstanding. India is very happy with his accomplishment.… pic.twitter.com/CFFl8p7yP2
ಪ್ಯಾರಾಲಿಂಪಿಕ್ಸ್‌ನಲ್ಲಿ ಬಿಲ್ಗಾರಿಕೆಯ ಈ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ಪ್ಯಾರಾ ಅರ್ಚರಿಯಲ್ಲಿ ವಿಶೇಷ ಚಿನ್ನ! Paralympics2024ರಲ್ಲಿ ಪುರುಷರ ವೈಯಕ್ತಿಕ ರಿಕರ್ವ್ ಓಪನ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ಹರ್ವಿಂದರ್ ಸಿಂಗ್ ಅವರಿಗೆ ಅಭಿನಂದನೆಗಳು! ಅವರ ನಿಖರತೆ, ಗಮನ ಮತ್ತು ಅಚಲವಾದ ಮನೋಭಾವವು ಅತ್ಯುತ್ತಮವಾಗಿದೆ. ಅವರ ಸಾಧನೆಯಿಂದ ಭಾರತಕ್ಕೆ ಸಂತಸವಾಗಿದೆ” ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತಕ್ಕೆ 22 ಪದಕ
ಹರ್ವಿಂದರ್ ಸಿಂಗ್ ಆರ್ಚರಿಯಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರೊಂದಿಗೆ, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತವು 22 ಪದಕಗಳನ್ನು ಪಡೆದು ದಾಖಲೆ ಬರೆದಿದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಇದುವರೆಗಿನ ಭಾರತದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಭಾರತ 4 ಚಿನ್ನ, 8 ಬೆಳ್ಳಿ ಹಾಗೂ 10 ಕಂಚು ಗೆದ್ದಿದ್ದು ಈ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.
ಈ ಸುದ್ದಿ ಓದಿ: Paris Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ 20 ಪದಕ ಬೇಟೆಯಾಡಿದ ಭಾರತ; ಐತಿಹಾಸಿಕ ಸಾಧನೆ