Monday, 25th November 2024

Parliament Winter Session: ಸಂಸತ್​ ಚಳಿಗಾಲದ ಅಧಿವೇಶನ ಶುರು- ಯಾವ್ಯಾವ ಮಸೂದೆಗಳು ಮಂಡನೆಯಾಗಲಿವೆ? ಇಲ್ಲಿದೆ ಡಿಟೇಲ್ಸ್‌

Parliament Winter Session

ನವದೆಹಲಿ : ಇಂದಿನಿಂದ ಸಂಸತ್‌ ಚಳಿಗಾಲ ಅಧಿವೇಶನ ಪ್ರಾರಂಭವಾಗಿದ್ದು, (Parliament Winter Session) ಸರ್ಕಾರ ವಿವಿಧ ಮಸೂದೆಗಳ ಮಂಡನೆಗೆ ತಯಾರಿಯನ್ನು ನಡೆಸಿದೆ. ವಕ್ಛ್‌ ಮಸೂದೆ (Waqf amedment bill) ಹಾಗೂ ಮಣಿಪುರಕ್ಕೆ ಸೇರಿದಂತೆ ಒಟ್ಟು 16 ವಿಧೇಯಕಗಳನ್ನು ಮಂಡನೆ ಮಾಡಲು ಸರ್ಕಾರ ಸಜ್ಜಾಗಿದೆ. ನಿನ್ನೆಯಷ್ಟೇ ಸರ್ವಪಕ್ಷ ಸಭೆ ಕರೆಯಲಾಗಿತ್ತು. ಇದರಲ್ಲಿ ಅದಾನಿ ಹಗರಣ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲು ವಿಪಕ್ಷಗಳು ಒತ್ತಾಯಿಸಿವೆ.

ಯಾವ ಯಾವ ಮಸೂದೆಗಳ ಮಂಡನೆ?

ಇಂದಿನಿಂದ ಡಿಸೆಂಬರ್‌ 20 ರವರೆಗೆ ನಡೆಯಲಿರುವ ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಹಲವು ಮಸೂದೆಗಳು ಮಂಡನೆಯಾಗಲಿವೆ

ಭಾರತೀಯ ಬಂದರು ಮಸೂದೆ : ಸರ್ಕಾರವು ಪ್ರಸ್ತಾಪಿಸಿದ ಹೊಸ ಕರಡು ಕಾನೂನೆಂದರೆ ಮರ್ಚೆಂಟ್ ಶಿಪ್ಪಿಂಗ್ ಬಿಲ್, ಇದು ಸಹಿ ಮಾಡಿರುವ ಅಂತರರಾಷ್ಟ್ರೀಯ ಕಡಲ ಒಪ್ಪಂದಗಳ ಅಡಿಯಲ್ಲಿ ಬರುತ್ತದೆ. ಇದು ಭಾರತದ ಅಂತಾರಾಷ್ಟ್ರೀಯ ಕಟ್ಟುಪಾಡುಗಳು ಮತ್ತು ಶಾಸನಬದ್ಧ ಅನುಸರಣೆಗೆ ಅನುಗುಣವಾಗಿ ಬಂದರುಗಳ ಸಂರಕ್ಷಣೆ, ಬಂದರುಗಳಲ್ಲಿ ಭದ್ರತೆ ಮತ್ತು ಮಾಲಿನ್ಯ ನಿಯಂತ್ರಣದಿಂದ ಸುರಕ್ಷಿತಗೊಳಿಸಲು ಕ್ರಮಗಳನ್ನು ಕೈಗೊಳ್ಳುವ ಗುರಿಯನ್ನು ಹೊಂದಿದೆ.

ಕರಾವಳಿ ಶಿಪ್ಪಿಂಗ್ ಬಿಲ್ ಹಾಗೂ ಕೋಸ್ಟಲ್ ಶಿಪ್ಪಿಂಗ್ ಬಿಲ್ : ಸರ್ಕಾರವು ಯೋಜಿಸಿರುವ ಹೊಸ ಕರಡು ಕಾನೂನಾಗಿದ್ದು, ಕಡಲ ಒಪ್ಪಂದಗಳ ಅಡಿಯಲ್ಲಿ ಭಾರತದ ಬಾಧ್ಯತೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಜತೆಗೆ, ಕರಾವಳಿ ಶಿಪ್ಪಿಂಗ್ ಬಿಲ್ ಮತ್ತು ಭಾರತೀಯ ಬಂದರುಗಳ ಮಸೂದೆಯನ್ನು ಪರಿಚಯಿಸಲು ಮತ್ತು ಅಂತಿಮವಾಗಿ ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ.

ವಕ್ಛ್‌ ಮಸೂದೆ : ಸದ್ಯ ದೇಶದಲ್ಲಿ ಅತೀ ಸುದ್ದಿಯಲ್ಲಿರುವ ವಕ್ಛ್‌ ರದ್ದತಿ. ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ ಸೇರಿದಂತೆ ಎಂಟು ಮಸೂದೆಗಳು ಲೋಕಸಭೆಯಲ್ಲಿ ಬಾಕಿ ಉಳಿದಿವೆ. ಇನ್ನೆರಡು ರಾಜ್ಯಸಭೆಯಲ್ಲಿವೆ. ಈ ವರ್ಷದ ವಕ್ಛ್‌ ರದ್ಧತಿ ಮಸೂದೆಯನ್ನು ಜಾರಿಗೊಳಿಸುವ ನಿರೀಕ್ಷೆಯಿದೆ.

ಇದರ ಹೊರತಾಗಿ ಇನ್ನೂ ಕೆಲ ಮಸೂದೆಗಳಾದ ಪಂಜಾಬ್‌ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ ,ಮರ್ಚೆಂಟ್‌ ಶಿಪ್ಪಿಂಗ್‌ ವಿಧೇಯಕ, ಭಾರತೀಯ ವಾಯುಯಾನ ವಿಧೇಯಕ (ಏರ್‌ ಟ್ರಾಫಿಕ್‌ ನಿರ್ವಹಣೆ ಕುರಿತ ಕಾನೂನು), ರಾಷ್ಟ್ರೀಯ ಸಹಕಾರ ವಿಶ್ವವಿದ್ಯಾಲಯ ವಿಧೇಯಕ (ದೇಶದಲ್ಲಿಸಹಕಾರ ವಿವಿ ಸ್ಥಾಪನೆ) , ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ, ಗೋವಾದ ಅಸೆಂಬ್ಲಿ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ, ಸಮುದ್ರದ ಮೂಲಕ ಸರಕು ಸಾಗಣೆ ಮಸೂದೆ 2024, ರೈಲ್ವೆ (ತಿದ್ದುಪಡಿ) ಮಸೂದೆ ಮತ್ತು ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆಗಳನ್ನು ಜಾರಿಗೊಳಿಸುವ ನಿರೀಕ್ಷೆಯಿದೆ.

ಸಂಸದೀಯ ವ್ಯವಹಾರ ಸಚಿವ ಕಿರಣ್‌ ರಿಜಿಜು, ಆರೋಗ್ಯ ಸಚಿವ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್‌ ಸಂಸದರಾದ ಗೌರವ್‌ ಗೊಗೋಯ್‌, ಜೈರಾಮ್‌ ರಮೇಶ್‌, ಅಕಾಲಿದಳದ ಹರ್‌ಸಿಮ್ರತ್‌ ಕೌರ್‌ ಬಾದಲ್‌, ಡಿಎಂಕೆಯ ಟಿ.ಎನ್‌.ಶಿವ, ಸಚಿವೆ ಅನುಪ್ರಿಯಾ ಪಟೇಲ್‌ ಸೇರಿದಂತೆ 30 ಪಕ್ಷಗಳ 42 ನಾಯಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ : One Nation One Election: ‘ಒಂದು ರಾಷ್ಟ್ರ, ಒಂದು ಚುನಾವಣೆ’ ವರದಿಗೆ ಕೇಂದ್ರದಿಂದ ಅಸ್ತು; ಶೀಘ್ರವೇ ಸಂಸತ್‌ನಲ್ಲಿ ಮಂಡನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗೆಸ್‌ ಹಾಗೂ ಮೈತ್ರಿಕೂಟಗಳು ಸಭೆ ಸೇರಿದ್ದು, ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ರಣತಂತ್ರವನ್ನು ಹೂಡಿದ್ದಾರೆ. ಕಾಂಗ್ರೆಸ್‌, ಗೌತಮ್‌ ಅದಾನಿ ಬಹುಕೋಟಿ ವಂಚನೆ ಕೇಸ್‌ ಬಗ್ಗೆ ಮಾತನಾಡುವ ಸಾಧ್ಯತೆ ಹೆಚ್ಚಾಗಿದೆ. ಮಣಿಪುರದಲ್ಲಿ ಆಗುತ್ತಿರುವ ನಿರಂತರ ಗಲಭೆಯನ್ನು ತಡೆಯುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಕೇಂದ್ರದ ವಿರುದ್ಧ ಪ್ರಬಲ ಅಸ್ತ್ರವನ್ನು ಬಳಸಬಹುದು.