Sunday, 22nd December 2024

Pawan Kalyan : ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ಗೆ ಕೊಲೆ ಬೆದರಿಕೆ!

Pawan Kalyan

ಹೈದರಾಬಾದ್‌ : ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಕಚೇರಿ ಸಿಬ್ಬಂದಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದ್ದು, ಅವರನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ (Death threat) ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಉಪಮುಖ್ಯಮಂತ್ರಿ ಅವರನ್ನು ಗುರಿಯಾಗಿಸಿಕೊಂಡು ಅಪರಿಚಿತ ವ್ಯಕ್ತಿ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಹೇಳಲಾಗಿದೆ.

ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ , ಪವನ್‌ ಕಲ್ಯಾಣ್‌ ಅವರನ್ನು ಕೊಲ್ಲುವುದಾಗಿ ಆಕ್ಷೇಪಾರ್ಹ ಭಾಷೆಯಲ್ಲಿ ಆರೋಪಿ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ. ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸೆಲ್ ಎಪಿ ಸೆಕ್ರೆಟರಿಯೇಟ್‌ನ ಎರಡನೇ ಬ್ಲಾಕ್‌ನಲ್ಲಿದೆ. ಪವನ್ ಕಲ್ಯಾಣ್ ಇಲ್ಲದಿದ್ದಾಗ, ಅವರ ಸಿಬ್ಬಂದಿಗೆ ಅವರನ್ನು ಕೊಲ್ಲುತ್ತೇವೆ ಪಕ್ಕದಲ್ಲೇ ಇದ್ದೇವೆ ಎಂದು ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬಂದವು. ಇದಲ್ಲದೇ ಇದರಲ್ಲಿ ಪವನ್‌ಗೆ ಅಸಭ್ಯ ಭಾಷೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಇದರಿಂದ ಅವರ ಸಿಬ್ಬಂದಿ ಆತಂಕಗೊಂಡು. ಈ ವಿಷಯವನ್ನು ಪವನ್ ಕಲ್ಯಾಣ್ ಅವರ ಗಮನಕ್ಕೆ ತಂದಿದ್ದಾರೆ. ಅವರ ಸಲಹೆಯಂತೆ ಸಿಬ್ಬಂದಿ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ತಕ್ಷಣ ಪ್ರತಿಕ್ರಿಯಿಸಿರುವ ಉನ್ನತ ಪೊಲೀಸ್ ಅಧಿಕಾರಿಗಳು ಪವನ್ ಕಲ್ಯಾಣ್ ಸಿಬ್ಬಂದಿಗೆ ಈ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಎಲ್ಲಿಂದ ಬಂದವು ಎಂದು ವಿಚಾರಣೆ ನಡೆಸುತ್ತಿದ್ದಾರೆ. ಪವನ್ ಹೊರತಾಗಿ ಬೇರೆ ಯಾವುದೇ ಸಚಿವರಿಗೆ ಇಂತಹ ಕರೆಗಳು ಬಂದಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಜನ ಸೇನಾ ಪಾರ್ಟಿ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಇತ್ತೀಚೆಗೆ ಪವನ್‌ ಕಲ್ಯಾಣ್‌ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೀನ ದೌರ್ಜನ್ಯವನ್ನು ಖಂಡಿಸಿದ್ದರು. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಬಾಂಗ್ಲಾದಲ್ಲಿ ಶಾಂತಿ ನೆಲಸಬೇಕಿದೆ. ಅಲ್ಲಿನ ಹಿಂದೂಗಳು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಅವರ ರಕ್ಷಣೆಯಾಗಬೇಕಿದೆ ಎಂದು ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ : Pawan Kalyan: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಅರೆಸ್ಟ್‌ ವಿರುದ್ಧ ಸಿಡಿದೆದ್ದ ಪವನ್‌ ಕಲ್ಯಾಣ್‌… ಭಾರತದ ಸಹಾಯ ಮರೆಯದಿರಿ ಎಂದು ಚಾಟಿ