ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಕೋಮು ದ್ವೇಷ ಹರಡಲು ಈ ಸಂಘಟನೆಗಳು ಯತ್ನಿಸಿದ್ದವು ಎಂಬುದರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದರ ಮೇಲೆ ನಿಷೇಧ ಹೇರಿತ್ತು.
2006 ರಲ್ಲಿ ಆರಂಭವಾದ ಪಿಎಫ್ಐ ಸಂಘಟನೆ ನಂತರದ ದಿನಗಳಲ್ಲಿ ಕೋಮು ಗಲಭೆ ನಡೆದ ವೇಳೆ ಈ ಸಂಘಟನೆಯ ಕಾರ್ಯಕರ್ತರ ಹೆಸರುಗಳು ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ವಿವಿಧ ರಾಜ್ಯಗಳಲ್ಲಿದ್ದ ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.