Friday, 10th January 2025

PM Narendra Modi: ‘ನಾನೂ ಒಬ್ಬ ಮನುಷ್ಯ… ದೇವರಲ್ಲ…ʼ ಪಾಡ್‌ಕಾಸ್ಟ್‌ಗೆ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಈಗಾಗಲೇ ಸೋಷಿಯಲ್ ಮೀಡಿಯಾ(social media) ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇದೀಗ ಹೊಸ ಟ್ರೆಂಡ್ ಆಗಿರುವ ಪಾಡ್ ಕಾಸ್ಟ್(Podcast)ಗೂ ಸಹ ಪ್ರಧಾನಿ ಮೋದಿ ಅವರು ಎಂಟ್ರಿ ಕೊಟ್ಟಿದ್ದು, ಜೆರೋದಾ(Zerodha) ಸಂಸ್ಥೆಯ ಸಹ-ಸಂಪ್ಥಾಪಕರಾಗಿರುವ ನಿಖಿಲ್ ಕಾಮತ್ ಅವರ ಸರಣಿ ಕಾರ್ಯಕ್ರಮ ‘ಪೀಪಲ್ ಬಯ ಡಬ್ಲ್ಯು.ಟಿ.ಎಫ್.’ ನಲ್ಲಿ ಪ್ರಧಾನಿ ಮೊದಿ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಜ.09ರ ಗುರುವಾರದಂದು ಸಾಯಂಕಾಲ ಕಾಮತ್ ಅವರು 2 ನಿಮಿಷ 13 ಸೆಕೆಂಡ್ ಗಳ ಟೀಸರ್ ಹೊರಬಿಡುವ ಮೂಲಕ ಪ್ರಧಾನಿ ಮೋದಿ ಅವರು ತನ್ನ ಪಾಡ್ ಕಾಸ್ಟ್ ನ ಅತಿಥಿ ಎಂಬ ಸುಳಿವನ್ನು ನೀಡಿದ್ದರು ಮತ್ತು ‘ಪೀಪ್ ವಿದ್ ದಿ ಪ್ರೈಮ್ ಮಿನಿಸ್ಟರ್ ಶ್ರೀ ನರೇಂದ್ರ ಮೋದಿ | ಎಪಿಸೋಡ್ 6 ಟ್ರೈಲರ್’ ಎಂದು ಕ್ಯಾಪ್ಷನ್ ನೀಡಿದ್ದರು.

ಈ ಟ್ರೈಲರ್ ನಲ್ಲಿ ಪ್ರಧಾನಿ ಮೋದಿ ಮತ್ತು ಕಾಮತ್ ಜೊತೆ ಸಂವಾದ ನಡೆಸುತ್ತಿರುವ ದೃಶ್ಯಾವಳಿಗಳು ಇದ್ದು, ಇದರಲ್ಲಿ ಪ್ರಧಾನಿಯವರ ರಾಜಕಿಯ ಜೀವನದಿಂದ ಹಿಡಿದು, ಸದ್ಯದ ಪರಿಸ್ಥಿತಿಯ ಜಾಗತಿಕ ಸಂಘರ್ಷದವರೆಗಿನ ವಿಚಾರಗಳ ತುಣುಕುಗಳು ಈ ಪಾಡ್ ಕಾಸ್ಟ್ ಬಗ್ಗೆ ಕುತೂಹಲ ಮೂಡಿಸಿವೆ.

ಈ ಪಾಡ್ ಕಾಸ್ಟ್ ನಲ್ಲಿ ಪ್ರಧಾನಿ ಮೋದಿ ಅವರು ತಾವು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತಾವು ಮಾಡಿದ್ದ ಭಾಷಣವೊಂದನ್ನು ನೆನಪಿಸಿಕೊಂಡಿದ್ದು, ಅದರಲ್ಲಿ ‘ತಪ್ಪುಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಾನೂ ಸಹ ಬಹಳಷ್ಟು ತಪ್ಪುಗಳನ್ನು ಮಾಡಿದ್ದೇನೆ. ನಾನೊಬ್ಬ ಮನುಷ್ಯ, ದೇವರಲ್ಲ’ ಎಂದು ಹೇಳಿಕೊಂಡಿದ್ದಾರೆ.
ಕಾಮತ್ ಅವರು ಕೊಂಚ ನರ್ವಸ್ ಆಗಿ ಹಿಂದಿಯಲ್ಲಿ ಸಂಭಾಷಣೆ ಪ್ರಾರಂಭಿಸುವ ಮೂಲಕ ಈ ಟ್ರೈಲರ್ ಪ್ರಾರಂಭಗೊಳ್ಳುತ್ತದೆ. “ನಾನು ನಿಮ್ಮ ಮುಂದೆ ಕುಳಿತು ಮಾತನಾಡುತ್ತಿದ್ದೇನೆ ; ನನಗೆ ಸ್ವಲ್ಪ ನರ್ವಸ್ ಆಗಿದೆ. ಇದು ನನ್ನ ಪಾಲಿಗೆ ಕಠಿಣ ಸಂವಾದವಾಗಿದೆ’ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಅವರು, ‘ಇದು ನನ್ನ ಮೊದಲ ಪಾಡ್ ಕಾಸ್ಟ್ ಆಗಿದೆ. ಇದು ನಿಮ್ಮ ಪ್ರೇಕ್ಷಕರಿಗೆ ಹೇಗನ್ನಿಸುತ್ತದೆ ಎಂದು ನನಗೆ ಗೊತ್ತಿಲ್ಲ’ ಎಂದು ಪ್ರತಿಕ್ರಿಯೆ ನೀಡುತ್ತಾರೆ.

ಈ ಟ್ರೈಲರನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ಕಾಮತ್ ಅವರ ಪ್ರಕಟನೆಯನ್ನು ರಿಪೋಸ್ಟ್ ಮಾಡಿದ್ದಾರೆ. ಮತ್ತು, ‘ನಾವು ನಿಮಗಾಗಿ ಇದನ್ನು ಸಿದ್ಧಪಡಿಸುವಾಗ ನಾವು ಎಂಜಾಯ್ ಮಾಡಿದಷ್ಟೇ ನೀವಿದನ್ನು ಎಂಜಾಯ್ ಮಾಡುತ್ತೀರೆಂದು ಅಂದುಕೊಂಡಿದ್ದೇವೆ’ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ತಮ್ಮ ಮೊದಲ ಮತ್ತು ಎರಡನೇ ಅವಧಿಯ ಪ್ರಧಾನಮಂತ್ರಿ ಪದವಿಯ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದಾಗ, ಮೋದಿ ಅವರು, ‘ಮೊದಲನೇ ಅವಧಿಯಲ್ಲಿ, ಜನರು ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದರು ಮತ್ತು ನಾನೂ ಸಹ ದೆಹಲಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ’ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಸದ್ಯಕ್ಕೆ ನಡೆಯುತ್ತಿರುವ ಜಾಗತಿಕ ಸಂಘರ್ಘದಲ್ಲಿ ಭಾರತದ ಪಾತ್ರದ ಕುರಿತಾಗಿಯು ಮಾತನಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Smog: ದೆಹಲಿಯನ್ನು ಆವರಿಸಿದ ದಟ್ಟ ಮಂಜು; ವಿಮಾನ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯ

Leave a Reply

Your email address will not be published. Required fields are marked *