Friday, 22nd November 2024

ಭಾರತೀಯರ ಭಾವನೆಗಳ ಬಗ್ಗೆ ವಿಪಕ್ಷ ಕಾಳಜಿ ವಹಿಸುವುದಿಲ್ಲ: ಪ್ರಧಾನಿ ಟೀಕೆ

ವದೆಹಲಿ: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ವ್ತಸ್ಥರಾಗಿರುವ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳದ್ದು ಮೊಘಲ್ ಮನಸ್ಥಿತಿ ಎಂದು ವಿಪಕ್ಷಗಳ ಮೇಲೆ ಆರೋಪ ಗಳ ಸುರಿಮಳೆಗೈದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಮಾತನಾಡಿದ ಮೋದಿ, ಸಾವನ್​​ ಮತ್ತು ನವರಾತ್ರಿಯ ಮಂಗಳಕರ ತಿಂಗಳುಗಳಲ್ಲಿ ಮಾಂಸಾಹಾರಿ ಆಹಾರ ತಿನ್ನುತ್ತಾರೆ. ಈ ಸಮಯದಲ್ಲಿ ಬಹುತೇಕ ಹಿಂದೂ ಕುಟುಂಬಗಳು ಶುದ್ಧ ಸಸ್ಯಾಹಾರಕ್ಕೆ ಸೀಮಿತ ವಾಗಿರುತ್ತದೆ. ಕಾನೂನು ಯಾರನ್ನೂ ಮಾಂಸ ತಿನ್ನುವುದನ್ನು ತಡೆಯುವುದಿಲ್ಲ, ನಾನೂ ಆ ಕೆಲಸ ಮಾಡುವುದಿಲ್ಲ. ಆದರೆ ಅವರು ಭಾರತೀಯರ ಭಾವನೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಆರ್​ಜೆಡಿ ಮುಖಂಡ ಲಾಲೂ ಪ್ರಸಾದ್​ ಯಾದವ್​ ಹಾಗೂ ಅವರ ಪುತ್ರ ತೇಜಸ್ವಿ ಯಾದವ್​ ಅವರ ಜೊತೆ ನಾನ್​ ವೆಜ್​ ಆಹಾರ ತಯಾರಿಸುವ ವಿಡಿಯೋವನ್ನು ಉಲ್ಲೇಖಿಸಿ ಮೋದಿ ವಾಗ್ದಾಳಿ ನಡೆಸಿದರು.

ಅವರ ನಾಯಕರೊಬ್ಬರು ‘ಸಾವನ್’ ತಿಂಗಳಲ್ಲಿ ಮಟನ್ ಬೇಯಿಸಲು ಅಪರಾಧಿ ಆಗಿರುವ ಜಾಮೀನಿನ ಮೇಲೆ ಹೊರಗಿರುವ ಮಿತ್ರರನ್ನು ಭೇಟಿ ಮಾಡಿದರು. ವೀಡಿಯೊಗಳನ್ನು ಚಿತ್ರೀಕರಿಸುವ ಮೂಲಕ ಭಾರತೀಯರ ನಂಬಿಕೆಗಳನ್ನು ಪ್ರಚೋದಿಸಿದರು ಎಂದು ಪ್ರಧಾನಿ ಆರೋಪಿಸಿದರು.

ಕಾಂಗ್ರೆಸ್​ ಭಾರತೀಯರ ಭಾವನೆಗಳೊಂದಿಗೆ ಆಟವಾಡುತ್ತೆ. ಇಂಡಿಯಾ ಬ್ಲಾಕ್‌ನ ಸದಸ್ಯರ ಉದ್ದೇಶವು ವಿಭಿನ್ನವಾಗಿದೆ. ಅವರ ಉದ್ದೇಶವು ಮೊಘಲರನ್ನು ಹೋಲುತ್ತದೆ ಎಂದು ಮಾತಿನಲ್ಲೇ ತಿವಿದರು.