Wednesday, 27th November 2024

ಸಂವೇದಿ ಸೂಚ್ಯಂಕದಲ್ಲಿ 500 ಅಂಕಗಳ ಏರಿಕೆ

share market

ಮುಂಬೈ: ಅಮೆರಿಕದ ಹಣಕಾಸು ನೀತಿ ನಿರ್ಧಾರ ಹಾಗೂ ಜಾಗತಿಕ ಷೇರುಮಾರುಕಟ್ಟೆಯ ಪಾಸಿಟಿವ್ ಟ್ರೆಂಡ್ ಪರಿಣಾಮ ಗುರುವಾರ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಸುಮಾರು 500 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 494.12 ಅಂಕಗಳ ಏರಿಕೆಯೊಂದಿಗೆ 58,282.15 ಅಂಕಗ ಳೊಂದಿಗೆ, ಎನ್ ಎಸ್ ಇ ನಿಫ್ಟಿ 122.15 ಅಂಕಗಳಷ್ಟು ಏರಿಕೆಯಾಗಿದ್ದು, 17,343.55 ಅಂಕಗಳ ಮಟ್ಟ ತಲುಪಿದೆ.

ಇನ್ಫೋಸಿಸ್, ಬಜಾಜ್ ಫೈನಾನ್ಸ್, ಎಚ್ ಸಿಎಲ್ ಟೆಕ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರ ಮತ್ತು ಎನ್ ಟಿಪಿಸಿ ಷೇರುಗಳು ಲಾಭಗಳಿಸಿದೆ.

ಕಳೆದ ಬುಧವಾರ ಷೇರುಪೇಟೆಯ ಸಂವೇದಿ ಸೂಚ್ಯಂಕ 329.06 ಅಂಕಗಳಷ್ಟು ಇಳಿಕೆಯೊಂದಿಗೆ 57,788.03 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಎನ್ ಎಸ್ ಇ ನಿಫ್ಟಿ 103.50 ಅಂಕ ಕುಸಿತಗೊಂಡಿದ್ದು, 17,221.40 ರ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿತ್ತು.