Saturday, 27th July 2024

ಭಾರತದ ಕಲುಷಿತ ನಗರಗಳ ಪಟ್ಟಿ: ದೆಹಲಿಗೆ ಅಗ್ರಸ್ಥಾನ

ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಭಾರತದ ಕಲುಷಿತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಾಷ್ಟ್ರ ರಾಜಧಾನಿ ದೆಹಲಿ ಅಗ್ರಸ್ಥಾನದಲ್ಲಿದ್ರೆ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಬಿಹಾರ ನಂತರದ ಸ್ಥಾನದಲ್ಲಿವೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯು ಡಿಸೆಂಬರ್ 1 ರಂದು ದೇಶದ 244 ನಗರಗಳ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಭಾರತದ 22 ನಗರಗಳು AQI 300 ಕ್ಕಿಂತ ಹೆಚ್ಚು ‘ಅತ್ಯಂತ ಕಳಪೆ’ ಗಾಳಿಯ ಗುಣಮಟ್ಟವನ್ನು ದಾಖಲಿಸಿದರೆ, 34 ಭಾರತೀಯ ನಗರಗಳು AQI 200 ಕ್ಕಿಂತ ಹೆಚ್ಚು ‘ಕಳಪೆ’ ಗಾಳಿಯ ಗುಣಮಟ್ಟವನ್ನು ದಾಖಲು ಮಾಡಿವೆ.

ಬಿಕಾನೇರ್, ಭಿವಾಡಿ ಮತ್ತು ಹನುಮಾನ್‌ಗಢ್ ಕ್ರಮವಾಗಿ 377, 362 ಮತ್ತು 360 AQI ದಾಖಲಿಸಿವೆ. ಇನ್ನು ಉತ್ತರ ಪ್ರದೇಶದ ನೋಯ್ಡಾ AQI 358 ನೊಂದಿಗೆ ಭಾರತ ಐದನೇ ಅತ್ಯಂತ ಕಲುಷಿತ ನಗರ ಎನಿಸಿಕೊಂಡಿದೆ. ಅಲ್ಲದೇ ಗ್ರೇಟ್‌ ನೊಯ್ಡಾದಲ್ಲಿ AQI 356 ಮತ್ತು ಮೀರತ್‌ನಲ್ಲಿ AQI 355 ದಾಖಲಾಗಿದ್ದು ನಂತರದ ಸ್ಥಾನದಲ್ಲಿವೆ.

ಬಿಹಾರ ಕೂಡ ಕಲುಷಿತ ನಗರಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಬಿಹಾರದ ರಾಜ್‌ಗಿರ್ AQI 345 ಮತ್ತು ಅರಾಹ್ ನಗರಗಳು AQI 342 ದಾಖಲಿಸಿವೆ. ಭಾರತದ ಟಾಪ್‌ 10ರ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿ ಹರಿಯಾಣದ ಮನೇಸರ್‌ ಇದ್ದು, ಇಲ್ಲಿ 339 ಎಕ್ಯೂಐ ರೆಕಾರ್ಡಿಂಗ್‌ ದಾಖಲಾಗಿದೆ.

ಬೆಗುಸರೈ 308, 327 ಘಾಜಿಯಾಬಾದ್, 319 ಗುರುಗ್ರಾಮ್, 317 ಮೇಘಾಲಯದ ಬೈರ್ನಿಹಾಟ್, 319 ಫರಿದಾಬಾದ್, 319, ಯುಪಿಯ ಹಾಪುರ್, 329 ಮತ್ತು ಪಟ್ನಾಹರ್‌ನಲ್ಲಿ 303, ಪಟ್ನಾಹರ್‌ನಲ್ಲಿ 333 ದಾಖಲಿಸಿವೆ.

ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಜೊತೆಗೆ ದೀಪಾವಳಿಯ ವೇಳೆಯಲ್ಲಿ ಭತ್ತದ ಕೊಯ್ಲು ಆರಂಭ ಗೊಳ್ಳುತ್ತದೆ. ಹೀಗಾಗಿ ಗಾಳಿಯ ಗುಣಮಟ್ಟ ಕ್ಷೀಣಿಸಿದೆ.

ಕರ್ನಾಟಕದ ಯಾವುದೇ ನಗರಗಳು ಕಲುಷಿತ ನಗರಗಳ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

Leave a Reply

Your email address will not be published. Required fields are marked *

error: Content is protected !!