Wednesday, 23rd October 2024

Prabhas Birthday : ಆ್ಯಕ್ಷನ್‌ ಹೀರೊ ಪ್ರಭಾಸ್‌, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದು ಬಂದಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್‌

Prabhas Birthday

ಬೆಂಗಳೂರು: ಉಪ್ಪಲಪತಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು ಎಂಬ ಮೂಲ ನಾಮ ಹೊಂದಿರುವ ಪ್ರಭಾಸ್, ಪ್ರಾದೇಶಿಕ ಸಿನೆಮಾದ ಗಡಿಗಳನ್ನು ಮೀರಿ ಮಿಂಚಿದ್ದಾರೆ. ಅಕ್ಟೊಬರ್‌ 23ರಂದು ಅವರಿಗೆ 45ನೇ ಬರ್ತ್‌ಡೇ (Prabhas Birthday). ತೆಲುಗು ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟರಾಗಿದ್ದ ಅವರು ಪ್ಯಾನ್-ಇಂಡಿಯಾ ಸೂಪಸ್ಟಾರ್‌ ಕೂಡ ಆಗಿ ಬೆಳೆದಿದ್ದಾರೆ. ಭಾರತದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾಗುವ ಅವರ ಪ್ರಯಾಣವು ಗಮನಾರ್ಹವಾಗಿದೆ.

ಪ್ರಭಾಸ್ 2002ರಲ್ಲಿ ತೆಲುಗು ಭಾಷೆಯ ‘ಡ್ರಾಮಾ ಈಶ್ವರ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರವು ಗಮನಾರ್ಹವಾಗಿ ಗೆಲ್ಲದೇ ಹೋದರೂ ಪ್ರಭಾಸ್‌ಗೆ ಗ್ರ್ಯಾಂಡ್ ಎಂಟ್ರಿ ಸಿಕ್ಕಿತು. ನಂತರ ಅವರು ರಾಘವೇಂದ್ರ (2003) ಎಂಬ ಮಾಸ್ ಆಕ್ಷನ್ ಚಿತ್ರದಲ್ಲಿ ಕಾಣಿಸಿಕೊಂಡರು. ಆದಾಗ್ಯೂ, ರೊಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ವರ್ಷಂ (2004) ವರೆಗೂ ಪ್ರಭಾಸ್ ಹೆಚ್ಚು ಗಮನ ಸೆಳೆಯಲಿಲ್ಲ. ಭಾವೋದ್ರಿಕ್ತ ಪ್ರೇಮಿಯ ಪಾತ್ರವು ಅವರನ್ನು ತೆಲುಗು ಉದ್ಯಮದಲ್ಲಿ ಚಿರಸ್ಥಾಯಿಯಾಗುವಂತೆ ಮಾಡಿತು.

ರಾಜಮೌಳಿ ನಿರ್ದೇಶನದ ಛತ್ರಪತಿ (2005) ಮೂಲಕ ಪ್ರಭಾಸ್ ಆಕ್ಷನ್ ಸ್ಟಾರ್ ಆಗಿ ಖ್ಯಾತಿ ಮತ್ತಷ್ಟು ಹೆಚ್ಚಿಸಿಕೊಂಡರು. ಇದು ಅವರ ಆಕ್ಷನ್ ಹೀರೋ ಇಮೇಜ್‌ಗೆ ಅಡಿಪಾಯ ಹಾಕಿತು. ಮುಂದಿನ ಕೆಲವು ವರ್ಷಗಳಲ್ಲಿ, ಪ್ರಭಾಸ್ ಪೌರ್ಣಮಿ (2006), ಬಿಲ್ಲಾ (2009) ಮತ್ತು ಡಾರ್ಲಿಂಗ್ (2010) ನಂತಹ ಹಿಟ್ ಚಿತ್ರಗಳನ್ನು ಕೊಟ್ಟರು.

ನಿರ್ದೇಶಕ ಎಸ್.ಎಸ್.ರಾಜಮೌಳಿ 2015 ರಲ್ಲಿ ನಿರ್ಮಿಸಿದ ‘ಬಾಹುಬಲಿ: ದಿ ಬಿಗಿನಿಂಗ್’ ಚಿತ್ರದೊಂಗೆಇ ಪ್ರಭಾಸ್ ವೃತ್ತಿಜೀವನದಲ್ಲಿ ಮಹತ್ವದ ತಿರುವು ಸಿಕ್ಕಿತು. ಪ್ರಭಾಸ್ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿಯ ದ್ವಿಪಾತ್ರಗಳನ್ನು ನಿರ್ವಹಿಸಿದ್ದರು. ಈ ಚಿತ್ರ ಭಾರಿ ಯಶಸ್ಸನ್ನು ಕಂಡಿತು. ಈ ಚಿತ್ರವನ್ನು ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಡಬ್ ಮಾಡಲಾಯಿತು. ಅವರು ಐದು ವರ್ಷ ಬಾಹುಬಲಿಗಾಗಿ ಶ್ರಮಿಸಿದರು.

ಇದರ ಮುಂದುವರಿದ ಭಾಗವಾದ ಬಾಹುಬಲಿ: ದಿ ಕನ್ ಕ್ಲೂಷನ್ (2017) ನಲ್ಲಿ ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಆಗಿ ಪ್ರಭಾಸ್‌ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಈ ಚಿತ್ರವು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಯಿತು. ವಿಶ್ವಾದ್ಯಂತ ₹ 1,800 ಕೋಟಿ ಗಳಿಸಿತು.

ಬಹುಮುಖ ಪ್ರತಿಭೆ

ಪ್ರಭಾಸ್ ಪ್ಯಾನ್-ಇಂಡಿಯಾ ನಟನಾಗಲು ಪ್ರಮುಖ ಕಾರಣವೆಂದರೆ ಅವರ ಸಮರ್ಪಣೆ. ಅವರು ಬಾಹುಬಲಿ ಪಾತ್ರದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದರು. ತೀವ್ರ ದೈಹಿಕ ತರಬೇತಿಗೆ ಒಳಗಾಗಿದ್ದರು. ಪಾತ್ರಕ್ಕೆ ಅಗತ್ಯವಾದ ದೇಹವನ್ನು ಸಾಧಿಸಲು ಕಟ್ಟುನಿಟ್ಟಾದ ಆಹಾರ ಕಾಪಾಡಿಕೊಳ್ಳುತ್ತಿದ್ದರು.

ಸಾಹೋ ಜೊತೆ ಬಾಲಿವುಡ್‌ಗೆ ಪ್ರವೇಶ

ಬಾಹುಬಲಿ ಯಶಸ್ಸಿನ ನಂತರ, ಪ್ರಭಾಸ್ ಸುಜೀತ್ ನಿರ್ದೇಶನದ ಆಕ್ಷನ್-ಥ್ರಿಲ್ಲರ್ ಸಾಹೋ (2019) ಚಿತ್ರದ ಮೂಲಕ ಬಾಲಿವುಡ್ ಮಾರುಕಟ್ಟೆಗೆ ಕಾಲಿಟ್ಟರು. ಈ ಹೈ ಬಜೆಟ್ ಚಿತ್ರವನ್ನು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಿಸಲಾಗಿತ್ತು ಸಾಹೋ ಮಿಶ್ರ ವಿಮರ್ಶೆಗಳನ್ನು ಪಡೆದರೂ ಹಣ ಮಾಡಿತು. ಕೆಲವು ಟೀಕೆಗಳ ಹೊರತಾಗಿಯೂ, ಚಿತ್ರದ ಆಕ್ಷನ್ ದೃಶ್ಯಗಳು ಮತ್ತು ಪ್ರಭಾಸ್ ಅವರ ಸ್ಟಾರ್ ಪವರ್ ಹೆಚ್ಚಿಸಿತು.

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್

ಪ್ರಭಾಸ್ ಪ್ಯಾನ್-ಇಂಡಿಯಾ ಸ್ಟಾರ್‌ಡಮ್‌ಗೆ ಏರಿರುವುದು ಅವರ ಪ್ರತಿಭೆ, ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ತೆಲುಗು ಚಿತ್ರರಂಗದಲ್ಲಿ ಅವರ ಆರಂಭಿಕ ದಿನಗಳಿಂದ ಹಿಡಿದು ಬಾಹುಬಲಿಯೊಂದಿಗಿನ ಅವರ ಪ್ರಗತಿ ಮತ್ತು ಬಾಲಿವುಡ್‌ನಲ್ಲಿ ಅವರ ನಿರಂತರ ಯಶಸ್ಸಿನವರೆಗೆ, ಪ್ರಭಾಸ್ ಸರಿಯಾದ ಪಾತ್ರಗಳು ಮತ್ತು ಸಮರ್ಪಣೆಯಿಂದ ಪ್ರಾದೇಶಿಕ ಗಡಿಗಳನ್ನು ಮೀರಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಪ್ರಭಾಸ್ ಅಭಿಮಾನಿಗಳ ಆಂದೋನ

ಟಾಲಿವುಡ್‌ ಸೂಪರ್‌ಸ್ಟಾರ್ ಪ್ರಭಾಸ್ ಅಕ್ಟೋಬರ್ 23ರಂದು ತಮ್ಮ ಹುಟ್ಟುಹಬ್ಬ (Prabhas Birthday) ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಸಂಭ್ರಮಾಚರಣೆಗಳು ದೊಡ್ಡ ಪ್ರಮಾಣದಲ್ಲಿ ಆರಂಭವಾಗಿವೆ. ಬಾಹುಬಲಿಯಂತಹ ಬಿಗ್‌ ಬಜೆಟ್ ಸಿನಿಮಾದ ಮೂಲಕ ಜಾಗತಿಕ ಖ್ಯಾತಿ ಗಳಿಸಿದ್ದ ನಟನ ಅಭಿಮಾನಿಗಳು ಶುಭಾಶಯ ಸುರಿಮಳೆ ಸುರಿಸುತ್ತಿದ್ದಾರೆ. ಈ ಶುಭಾಶಯಗಳು ಡಿಜಿಟಲ್‌ ಆಂದೋಲನದ ರೀತಿ ನಡೆಯುತ್ತಿವೆ.

ಅಂದ ಹಾಗೆ ಫ್ಯಾಂಡೆಮಿಕ್ ಎಂಬ ಪ್ಲ್ಯಾಟ್‌ಫಾರ್ಮ್‌ ಪ್ರಭಾಸ್‌ಗೆ ಜನುಮದಿನದ ಶುಭಾಶಯ ಕಳುಹಿಸಲು ಅವಕಾಶ ಮಾಡಿಕೊಟ್ಟಿದೆ. ಜನ್ಮದಿನಕ್ಕೆ ಕೆಲವು ದಿನಗಳ ಮೊದಲು ಆರಂಭಗೊಂಡಿರುವ ಫ್ಯಾಂಡೆಮಿಕ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳು ನಿರಂತರವಾಗಿ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ.

10 ಲಕ್ಷ ಶುಭಾಶಯಗಳ ಗುರಿ

ಮೊದಲ ಕೆಲವು ಗಂಟೆಗಳಲ್ಲಿ, ಜಾಗತಿಕವಾಗಿ ಅವರ ಅಭಿಮಾನಿಗಳಿಂದ 1,25,000 ಕ್ಕೂ ಹೆಚ್ಚು ಶುಭಾಶಯಗಳು ಹರಿದುಬಂದಿದ್ದವು. ಆ ಸಂಖ್ಯೆಗಳು ಏರುತ್ತಲೇ ಇವೆ. ಅದನ್ನು 10 ಲಕ್ಷ ದಾಟಿಸುವ ಗುರಿ ಅಭಿಮಾನಿಗಳದ್ದು. ಈ ಮೂಲಕ ಭಾರತದ ಚಲಚಿತ್ರ ನಟರ ಅಭಿಮಾನಿಗಳ ವರ್ಗದಲ್ಲಿ ದಾಖಲೆ ಸೃಷ್ಟಿಸುವುದು ಅವರ ಇರಾದೆಯಾಗಿದೆ.

ಇದನ್ನೂ ಓದಿ: Chaithra Kundapura Marriage: ಹಸೆಮಣೆ ಏರಲು ಸಜ್ಜಾದ ಚೈತ್ರಾ ಕುಂದಾಪುರ: ವರ ಯಾರು ಗೊತ್ತೇ?

ಪ್ರಭಾಸ್ 45 ನೇ ವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿ ಇರುವಾಗಲೇ ಬೃಹತ್ ಡಿಜಿಟಲ್ ಸಾಧನೆ ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ. ಇದು ಯಶಸ್ವಿಯಾದರೆ, ಟಾಲಿವುಡ್‌ನಲ್ಲಿ ಗಮನಾರ್ಹ ಸಾಧನೆಯಾಗುತ್ತದೆ. ಡಿಜಿಟಲ್ ಯುಗದಲ್ಲಿ ಅಭಿಮಾನಿಗಳು ತಮ್ಮ ಆರಾಧ್ಯ ದೈವಗಳ ಮೇಲಿನ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದಕ್ಕೆ ಇದು ದೊಡ್ಡ ಉದಾಹರಣೆ

ಟೋಕಿಯೊದಿಂದ ಶುಭಾಶಯಗಳು

ಜಪಾನ್‌ನ ಟೋಕಿಯೊದ ಅಭಿಮಾನಿಯೊಬ್ಬರು ಪ್ರಭಾಸ್‌ಗೆ ಶುಭಾಶಯ ಹೇಳಿದ್ದಾರೆ. ಅವರ ವೀಡಿಯೊ ಮೂಲಕ ಶುಭಾಶಯಗಳನ್ನು ಕಳುಹಿಸಿದ್ದಾರೆ. ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್‌ ವಿಖ್ಯಾತಿ ಜಾಗತಿಕ ಮಟ್ಟಕ್ಕೆ ಮುಟ್ಟಿತ್ತು. ಸಿನಿಮಾ 600 ಕೋಟಿ ರೂ.ಗಳನ್ನು ಗಳಿಸಿತ್ತು. ಪ್ರಭಾಸ್ ನಟಿಸಿಸ ಸಾಹೋ ಮತ್ತು ರಾಧೆ ಶ್ಯಾಮ್ ಚಲನಚಿತ್ರಗಳು ನಿರೀಕ್ಷೆಗಳನ್ನು ಪೂರೈಸದಿದ್ದರೂ, ನಟನ ಅಭಿಮಾನಿ ಬಳಗವು ಅವರ ಬಗ್ಗೆ ವಿಶ್ವಾಸ ಹೊಂದಿದೆ.

ಉಪ್ಪಲಪತಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು ಎಂಬ ಮೂಲ ನಾಮ ಹೊಂದಿರುವ ಪ್ರಭಾಸ್, ಪ್ರಾದೇಶಿಕ ಸಿನೆಮಾದ ಗಡಿಗಳನ್ನು ಮೀರಿ ಮಿಂಚಿದ್ದಾರೆ. ತೆಲುಗು ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟರಾಗಿದ್ದ ಅವರು ಪ್ಯಾನ್-ಇಂಡಿಯಾ ಸೂಪಸ್ಟಾರ್‌ ಕೂಡ ಆಗಿ ಬೆಳೆದಿದ್ದಾರೆ. ಭಾರತದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾಗುವ ಅವರ ಪ್ರಯಾಣವು ಗಮನಾರ್ಹವಾಗಿದೆ.