ಬಾದಲ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಕೆಲದ ದಿನಗಳಿಂದ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯು ತ್ತಿದ್ದರು. ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಪ್ರಕಾಶ್ ಸಿಂಗ್ ಬಾದಲ್ ಜಿ ಅವರ ನಿಧನದಿಂದ ತುಂಬಾ ದುಃಖವಾಗಿದೆ. ಅವರು ಭಾರತೀಯ ರಾಜಕೀಯದ ಅಗಾಧ ವ್ಯಕ್ತಿ, ಮತ್ತು ನಮ್ಮ ರಾಷ್ಟ್ರಕ್ಕೆ ಮಹತ್ತರ ಕೊಡುಗೆ ನೀಡಿದ ಗಮನಾರ್ಹ ರಾಜನೀತಿಜ್ಞರಾಗಿದ್ದರು. ಅವರು ದೇಶದ ಪ್ರಗತಿಗೆ ಅವಿರತ ವಾಗಿ ಶ್ರಮಿಸಿದರು ಎಂದು ಹೇಳಿದ್ದಾರೆ.
ಡಿಸೆಂಬರ್ 8, 1927 ರಂದು ಪಂಜಾಬ್ನ ಅಬುಲ್ ಖುರಾನಾ ಗ್ರಾಮದಲ್ಲಿ ಜನಿಸಿದ ಬಾದಲ್ ಐದು ದಶಕಗಳಿಂದ ಭಾರತೀಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಐದು ಬಾರಿ ಪಂಜಾಬ್ನ ಮುಖ್ಯಮಂತ್ರಿಯಾಗಿದ್ದರು.