ಒಡಿಶಾ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ಒಡಿಶಾಕ್ಕೆ ಭೇಟಿ ನೀಡಲಿದ್ದು, ಬಳಿಕ ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ. ಫೆ.19 ಮತ್ತು 20 ಒಡಿಶಾದಲ್ಲಿ ಇರಲಿದ್ದು, ಫೆ.21 ಮತ್ತು ಫೆ.22ರಂದು ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರಾಷ್ಟ್ರಪತಿ ಕೋವಿಂದ್ ರನ್ನು ಸ್ವಾಗತಿಸಲಿದ್ದಾರೆ. ಒಡಿಸಾದ ಶ್ರೀ ಚೈತನ್ಯ ಗೌಡಿಯಾ ಮಠದಲ್ಲಿ ನಡೆಯ ಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಭಾಗಿಯಾಗಲಿದ್ದಾರೆ. ಸಂಜೆ 4 ರಿಂದ 6ರರವರೆಗೆ ಮಠಕ್ಕೆ ಸಾರ್ವಜನರಿಕರ ಪ್ರವೇಶ ನಿರ್ಬಂಧಿಸಲಾಗಿದೆ.