ಮದ್ದೂರು ಮಾರುಕಟ್ಟೆಯ ಒಟ್ಟು ವಹಿವಾಟಿನ ಶೇ.90ರಷ್ಟು ಎಳನೀರು ದೆಹಲಿಗೆ ರವಾನೆಯಾಗುತ್ತಿದ್ದು, ಅಲ್ಲಿ ಚಳಿ ಮತ್ತು ಮಳೆ ಇರುವ ಕಾರಣ ಬೇಡಿಕೆ ಕುಸಿದಿದೆ. ಇದರಿಂದ ಕಳೆದ 25 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಎಳನೀರು ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, 20 ರೂಪಾಯಿಗಳಷ್ಟು ಕಡಿಮೆಯಾಗಿದೆ.
ತಿಂಗಳ ಹಿಂದೆ 36 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಎಳನೀರು ಕೆಲದಿನಗಳಿಂದ ಕೇವಲ 14 – 15 ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ಮಾರುಕಟ್ಟೆಗೆ ಎಳನೀರು ತಂದ ರೈತರು ಕಂಗಾಲಾಗಿದ್ದಾರೆ. ಎಳನೀರು ಕೊಯ್ದ ಖರ್ಚು ಸಹ ಗಿಟ್ಟುತ್ತಿಲ್ಲ ಎಂಬುದು ರೈತರ ಅಳಲಾಗಿದೆ. ರಾಜ್ಯದಲ್ಲಿ ಈಗಲೂ 30ರಿಂದ 35 ರೂಪಾಯಿಗೆ ಎಳನೀರು ಸಾರ್ವಜನಿಕರಿಗೆ ಮಾರಾಟವಾಗುತ್ತಿದೆ.