Thursday, 19th September 2024

ಅತಿಯಾದ ಚಾರ್ಜಿಂಗ್: ಏಳು ಎಲೆಕ್ಟ್ರಿಕ್ ಬೈಕ್ ಗಳಿಗೆ ಬೆಂಕಿ

ಪುಣೆ: ಮಹಾರಾಷ್ಟ್ರದ ಪೂನಾದ ಶೋರೂಮ್ ನಲ್ಲಿ ಚಾರ್ಜಿಂಗ್ ಮಾಡುವ ವೇಳೆ ಏಳು ಎಲೆಕ್ಟ್ರಿಕ್ ಬೈಕ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಪೂನಾದ ಗಂಗಾಧಾಮ್ ಬಡಾವಣೆಯಲ್ಲಿರುವ ಶೋರೂಮ್ ನಲ್ಲಿ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಶೋ ರೂಮ್ ಭಸ್ಮವಾಗಿದೆ. ಚಾರ್ಜಿಂಗ್ ವೇಳೆ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಅತಿಯಾದ ಚಾರ್ಜಿಂಗ್ ಮಾಡಿದ್ದರಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮಾರ್ಚ್ ನಲ್ಲಿ ಕೂಡ ಚಾರ್ಜಿಂಗ್ ವೇಳೆ ವಾಹನವೊಂದು ಸುಟ್ಟು ಹೋಗಿತ್ತು.