Saturday, 14th December 2024

ನಿಗದಿಯಂತೆ ಜುಲೈ 12ರಂದು ಪುರಿ ಜಗನ್ನಾಥ ರಥಯಾತ್ರೆ

ಭುವನೇಶ್ವರ: ಒಡಿಶಾದ ಪುರಿ ಪಟ್ಟಣದಲ್ಲಿ ಜಗನ್ನಾಥ ರಥಯಾತ್ರೆ ಈ ವರ್ಷವೂ ನಿಗದಿಯಂತೆ ಜುಲೈ 12ರಂದು ನಡೆಯಲಿದೆ ಎಂದು ವರದಿಯಾಗಿದೆ.

ಕೋವಿಡ್‌ ಮಾರ್ಗಸೂಚಿ ನಿಯಮಗಳ ಅನುಸಾರ ರಥಯಾತ್ರೆ ನಡೆಯಲಿದೆ. ಭಕ್ತರಿಗೆ ಪ್ರವೇಶ ಇರುವುದಿಲ್ಲ ಎಂದು ಸರ್ಕಾರ ಪ್ರಕಟಿಸಿದೆ. ಕೋವಿಡ್‌ ಕಾರಣದಿಂದ ಕಳೆದ ವರ್ಷವೂ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ವಿಶೇಷ ಆಯುಕ್ತ (ಎಸ್‌ಆರ್‌ಸಿ) ಪಿ.ಕೆ.ಜೆನಾ ಅವರು, ಕಳೆದ ವರ್ಷ ಸುಪ್ರೀಂ ಕೋರ್ಟ್‌ ನೀಡಿದ್ದ ಎಲ್ಲ ಮಾರ್ಗಸೂಚಿಗಳ ಪರಿಧಿಯಲ್ಲಿಯೇ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಲಿದ್ದೇವೆ ಎಂದು ತಿಳಿಸಿದರು. ರಥಯಾತ್ರೆ ಅವಧಿಯಲ್ಲಿ ಕೋವಿಡ್ ನೆಗೆಟಿವ್‌ ಇರುವ, ಪೂರ್ಣವಾಗಿ ಲಸಿಕೆ ಪಡೆದಿರುವ ಆಯ್ದ ಕೆಲವರಿಗೆ ‘ಸ್ನಾನ ಪೂರ್ಣಿಮಾ’ ಹಾಗೂ ಇತರೆ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಒಂಭತ್ತು ದಿನ ನಡೆಯುವ ರಥ ಎಳೆಯುವ ಜಾತ್ರೆಗೆ ಕೇವಲ 500 ಜನರಿಗಷ್ಟೇ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ಅವರ ಪ್ರಕಾರ, ಪುರಿ ನಗರದಲ್ಲಿ ಸದ್ಯ ನಿತ್ಯ ಸರಾಸರಿ 300 ಕೋವಿಡ್‌ ಪ್ರಕರಣಗಳು ದಾಖಲಾ ಗುತ್ತಿವೆ.