ಹೈದರಾಬಾದ್: ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು ಬಹು ದಿನಗಳಿಂದ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ದಿನ ಕೊನೆಗೆ ಬಂದೇ ಬಿಟ್ಟಿದೆ. ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ-ಫಹದ್ ಫಾಸಿಲ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಪುಷ್ಪ 2’ ಚಿತ್ರ (Pushpa 2 Movie) ತೆರೆಕಂಡಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಈ ಚಿತ್ರವನ್ನು ಎರಡೂ ಕೈ ಚಾಚಿ ಸ್ವಾಗತಿಸಿದ್ದಾರೆ. ಅಲ್ಲು ಅರ್ಜುನ್ ಪುಷ್ಪರಾಜ್ ಪಾತ್ರದಲ್ಲಿ ಜೀವಿಸಿದ್ದು, ಅವರ ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲಿಯೂ ಗಂಗಮ್ಮ ಜಾತ್ರೆಯ (Gangamma Jatara) ದೃಶ್ಯದಲ್ಲಿನ ನಟನೆಯನ್ನು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಗಂಗಮ್ಮ ತಾಯಿ ಅವತಾರದಲ್ಲಿ ಅಲ್ಲು ಅರ್ಜುನ್ ಅಬ್ಬರಿಸಿದ್ದು, ಫ್ಯಾನ್ಸ್ ರೋಮಾಂಚನಗೊಂಡಿದ್ದಾರೆ. ʼಪುಷ್ಪ 2ʼ ಚಿತ್ರದ ಪ್ರಮುಖ ಭಾಗವಾಗಿರುವ ಗಂಗಮ್ಮ ಜಾತ್ರೆಯ ಹಿನ್ನೆಲೆ ಏನು? ಯಾಕಾಗಿ ಆಚರಿಸಲಾಗುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಸೌದಿ ಅರೇಬಿಯಾದಲ್ಲಿ ಈ ಗಂಗಮ್ಮ ಜಾತ್ರೆಗೆ ಕತ್ತರಿ ಹಾಕಲಾಗಿದೆ. 19 ನಿಮಿಷ ಅವಧಿಯ ಈ ದೃಶ್ಯ ಸದ್ಯ ವೀಕ್ಷಕರ ಫೆವರೇಟ್ ಎನಿಸಿಕೊಂಡಿದೆ. ಪ್ರವಾಸೋದ್ಯಮ ಸಚಿವಾಲಯದ ವೆಬ್‌ಸೈಟ್ ಪ್ರಕಾರ ತಿರುಪತಿ ಶ್ರೀ ವೆಂಕಟೇಶ್ವರ ದೇವರ ಕಿರಿಯ ಸಹೋದರಿ ಈ ಗಂಗಮ್ಮ. ಸಾಮಾನ್ಯವಾಗಿ ತಿರುಪತಿಯಲ್ಲಿ ಗಂಗಮ್ಮ ಜಾತ್ರೆಯನ್ನು ನಡೆಸಲಾಗುತ್ತದೆ. ವಾರ್ಷಿಕವಾಗಿ ಆಯೋಜಿಸಲಾಗುವ ಈ ಧಾರ್ಮಿಕ ಕಾರ್ಯಕ್ರಮ ಮೇಯಲ್ಲಿ ನೆರವೇರುತ್ತದೆ.
Biggg Congratulations @alluarjun Anna & Team… From PK FANS❤️
— Sunny Chowdary (@SunnyCh12916160) December 5, 2024
Blockbuster Masss Jatharaaa….🔥🔥🔥
Jathara Lo Dance & Fight Absolutely Cinema…💥💥💥💥🥵🥵🥵🥵🥵@alluarjun#Pushpa2 #Pushpa2ThaRule#Pushpa2 #Push pa2 #Pushpa2TheRuleReview#Pushpa2 pic.twitter.com/xu1eDurBSu
ಗಂಗಮ್ಮ ಜಾತ್ರೆಯ ಹಿನ್ನೆಲೆ
ಜಾತ್ರೆಯ ಸಮಯದಲ್ಲಿ ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀ ವೆಂಕಟೇಶ್ವರ ಸ್ವಾಮಿಯಿಂದ ಸಹೋದರಿ ಗಂಗಮ್ಮನಿಗೆ ಉಡುಗೊರೆ ರೂಪದಲ್ಲಿ ಪರಿಸನ್ನು ಕಳುಹಿಸಲಾಗುತ್ತದೆ. ಈ ಪರಿಸು ಸೀರೆ, ಅರಸಿನ, ಕುಂಕುಮ, ಬಳೆಯನ್ನು ಒಳಗೊಂಡಿರುತ್ತದೆ. ದಂತಕಥೆಯ ಪ್ರಕಾರ ‘ಪಾಳೇಗಾಡು’ ಎಂದು ಕರೆಯಲ್ಪಡುವ ಸ್ಥಳೀಯ ಮುಖ್ಯಸ್ಥನ ಸುಂದರ ಮಹಿಳೆಯೊಬ್ಬಳಿಗೆ ನಿರಂತರ ಹಿಂಸೆ ನೀಡುತ್ತಿದ್ದ. ಅವನ ಕ್ರೌರ್ಯದಿಂದ ಬೇಸೆತ್ತ ಮಹಿಳೆ ಜಗನ್ಮಾತಾ ದೇವಿಯನ್ನು ಮನಸಾರೆ ಪ್ರಾರ್ಥಿಸುತ್ತಿದ್ದಳು. ನಂತರ ತಿರುಪತಿ ಬಳಿಯ ಅವಿಲಾಲಾ ಗ್ರಾಮದಲ್ಲಿ ಗಂಗಮ್ಮನಾಗಿ ಜನಿಸಿದಳು.
ಬೆಳೆಯುತ್ತಿದ್ದ ಗಂಗಮ್ಮನ ಮೇಲೆ ಪಾಳೇಗಾಡಿನ ವಕ್ರದೃಷ್ಟಿ ಬಿದ್ದಿತ್ತು. ಒಂದು ದಿನ ಆಕೆಯನ್ನು ಅವಮಾನಿಸಿ ಸಾರ್ವಜನಿಕವಾಗಿ ಕೈ ಹಿಡಿದು ಎಳೆದಾಡಿದ. ಅವನ ದುರ್ವರ್ತನೆಯಿಂದ ಕೋಪಗೊಂಡ ಗಂಗಮ್ಮ ತನ್ನ ವಿಶ್ವರೂಪವನ್ನು ತೋರಿಸಿದಳು. ಇದರಿಂದ ಭಯಗೊಂಡ ಆತ ಓಡಿಹೋಗಿ ಅವಿತುಕೊಂಡಿದ್ದ.
ಗಂಗಮ್ಮ 3 ದಿನಗಳ ಕಾಲ ಹಲವು ವೇಷಭೂಷಣಗಳನ್ನು ಧರಿಸಿ ಪಾಳೇಗಾಡುವನ್ನು ಹುಡುಕಾಡಿದಳು. 4ನೇ ದಿನ ಪಾಳೇಗಾಡು ಸಾರ್ವಜನಿಕವಾಗಿ ಗಂಗಮ್ಮನ ಕೈಯಿಂದ ಹತನಾದ. ದುಷ್ಟನ ಕೈಯಿಂದ ತಮ್ಮನ್ನು ಕಾಪಾಡಿದ್ದಕ್ಕಾಗಿ ಊರವರು ಅಂದಿನಿಂದ ಕೃತಜ್ಞಾ ಪೂರ್ವಕವಾಗಿ ಗಂಗಮ್ಮನನ್ನು ಆದಾಧಿಸತೊಡಗಿದರು. ಆ ಸಂಪ್ರದಾಯ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಆಚರಣೆಯ ಭಾಗವಾಗಿ ಭಕ್ತರು ದೇವಾಲಯಕ್ಕೆ ನಡೆದುಕೊಂಡು ಹೋಗುವಾಗ ಸಪ್ಪರ್ಲಾವ್ ಎಂದು ಕರೆಯಲ್ಪಡುವ ಗೋಪುರದಂತಹ ರಚನೆಗಳನ್ನು ಒಯ್ಯುತ್ತಾರೆ. ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟ ಗೋಪುರವನ್ನು ಭುಜದ ಮೇಲೆ ಸಾಗಿಸಲಾಗುತ್ತದೆ.
ಜಾತ್ರೆಯ ಕೊನೆಯ ದಿನ ಪುರುಷರು ಮಹಿಳೆಯ ರೀತಿ ವೇಷ ಧರಿಸಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳುತ್ತಾರೆ. ʼಪುಷ್ಪ 2ʼ ಚಿತ್ರದಲ್ಲಿ ಈ ಆಚರಣೆಯನ್ನು ತೋರಿಸಲಾಗಿದೆ. ನಾಯಕ ಅಲ್ಲು ಅರ್ಜುನ್ ಗಂಗಮ್ಮ ದೇವಿಯ ಅವತಾರದಲ್ಲಿ ಕಂಡು ಬಂದಿದ್ದಾರೆ. ನೀಲಿ ಸೀರೆ ಧರಿಸಿ, ಮುಖಕ್ಕೆ ಬಣ್ಣ ಬಳಿದು ಪಾತ್ರಕ್ಕೆ ಜೀವ ತುಂಬಿದ್ದಾರೆ.
ಜಾತ್ರೆಯಲ್ಲಿ ಪುರುಷರು ಸೀರೆ ಧರಿಸುವ ಆಚರಣೆಯನ್ನು ಪೆರಂಟಾಲು ವೇಷಂ ಎಂದು ಕರೆಯಲಾಗುತ್ತದೆ. ಇದನ್ನು ಸಾಂಪ್ರದಾಯಿಕವಾಗಿ ಕೈಕಲಾ ಕುಲದವರು ನಡೆಸಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಇದರಲ್ಲಿ ಇತರ ಸಮುದಾಯದವರೂ ಭಾಗವಹಿಸುತ್ತಿದ್ದು, ಹಲವು ಪುರುಷರು ಸೀರೆ, ವಿಗ್ ಮತ್ತು ಇತರ ಮೇಕಪ್ ಧರಿಸಿ ಪಾಲ್ಗೊಳ್ಳುತ್ತಾರೆ.
ಈ ಸುದ್ದಿಯನ್ನೂ ಓದಿ: Pushpa 2 : ʼಪುಷ್ಪ 2ʼ ಗೆ ಸೆನ್ಸಾರ್ ಬೋರ್ಡ್‌ನಿಂದ ಆಕ್ಷೇಪಣೆ – ಹಿಂಸಾತ್ಮಕ ದೃಶ್ಯಗಳಿಗೆ ಕತ್ತರಿ!