ಹೈದರಾಬಾದ್ ಸುಕುಮಾರ್ (Sukumar) ನಿರ್ದೇಶನದ ಐಕಾನ್ ಸ್ಟಾರ್ (Icon Star) ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಫಾಹದ್ ಫಾಸಿಲ್ (Fahadh Faasil) ಅಭಿನಯದ ಸೂಪರ್ ಡೂಪರ್ ಚಿತ್ರ ಪುಷ್ಪ-2 (Pushpa 2) ಬಿಡುಗಡೆಯಾದ ದಿನದಿಂದಲೂ ಒಂದಲ್ಲ ಒಂದು ಕಾರಣಗಳಿಂದ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಚಿತ್ರ ನಿರ್ಮಾಣ ಸಂಸ್ಥೆಯವರು ‘ದಮ್ಮುಂಟೆ ಪಟ್ಟುಕೊರಾ ಶೇಖಾವತು.. (Dammunte pattukora Shekawathu)’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದರು. ಇದು, ಚಿತ್ರದಲ್ಲಿ ಪುಷ್ಪರಾಜ್ ಮತ್ತು ಭನ್ವರ್‌ಸಿಂಗ್ ನಡುವಿನ ಡೈಲಾಗ್ ಆಧಾರದಲ್ಲಿ ಈ ಹಾಡನ್ನು ರಚಿಸಲಾಗಿದೆ. ಈ ಹಾಡು ವಿವಾದವನ್ನು ಸೃಷ್ಟಿಸುತ್ತಿದ್ದಂತೆ ಈ ಹಾಡನ್ನು ಹಿಂಪಡೆದುಕೊಳ್ಳಲಾಗಿತ್ತು. ಆದರೆ ಬಳಿಕ ಒಂದೇ ದಿನದ ಅಂತರದಲ್ಲಿ ಮತ್ತೆ ಈ ಹಾಡನ್ನು ರಿ-ರಿಲೀಸ್ ಮಾಡಿದೆ.
ಈ ಚಿತ್ರದಲ್ಲಿ ಪುಷ್ಪ ಪೊಲೀಸ್ ಆಫೀಸರ್‌ಗೆ ಟಾಂಗ್ ಕೊಡುವ ಸೀನ್ ಇದಾಗಿದ್ದು, ಇದರಲ್ಲಿ ಪುಷ್ಪ, ‘ದಮ್ಮುಂಟೆ ಪಟ್ಟುಕೊರಾ ಶೇಖಾವತು, ಪಟ್ಟುಕುಂಟೆ ವಡಿಲೆಸ್ಟಾ ಸಿಂಡಿಕೇಟು. (ಸಾಧ್ಯವಾದ್ರೆ ನನ್ನನ್ನು ಹಿಡಿ ಶೇಖಾವತ್, ಇದ್ರಲ್ಲಿ ನಿವು ಯಶಸ್ವಿಯಾದ್ರೆ ನಾನು ಸಿಂಡಿಕೇಟ್ ಬಿಟ್ಟು ಬಿಡ್ತೇನೆ)
ಆ ಬಳಿಕದ ಸೀನ್ ನಲ್ಲಿ, ಭನ್ವರ್ ಪುಷ್ಪನನ್ನು ಸಿಕ್ಕಿಹಾಕಿಸಿದೆ ಎಂದುಕೊಳ್ಳುತ್ತಿರುವಾಗಲೇ ಆ ಪೊಲೀಸ್ ಅಧಿಕಾರಿ ತನ್ನ ಡೈಲಾಗ್ ಗಳನ್ನು ಮಿಕ್ಸ್ ಮಾಡಿ ಈ ಹಾಡನ್ನು ರಿಮಿಕ್ಸ್ ಮಾಡಲಾಗಿದೆ. ಈ ಫಿಲ್ಮನ್ನು ನೋಡಿದವರು ಅಲ್ಲಿನ ಸೀನನ್ನು ಈ ಹಾಡಿನೊಂದಿಗೆ ಲಿಂಕ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ.
ಈ ಹಾಡನ್ನು ಟಿ-ಸಿರಿಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಿದ ಕೂಡಲೇ ಇದನ್ನು ತನ್ನ ಚಾನೆಲ್ ನಿಂದ ತೆಗೆದುಹಾಕಿತ್ತು. ಆ ಬಳಿಕ ಈ ಹಾಡು ವಿಚಿತ್ರವಾಗಿದೆ ಅಥವಾ ಅಸೂಕ್ಷ್ಮತೆಯಿಂದ ಕೂಡಿದೆ ಎಂದು ನೆಟ್ಟಿಗರು ಚರ್ಚೆಯನ್ನು ಪ್ರಾರಂಭಿಸಿದ್ದರು. ಈ ನಡುವೆ, ‘ವೈಲ್ಡ್ ಫೈರ್ ಆಟಿಟ್ಯೂಡ್ ಆಫ್ ಪುಷ್ಪರಾಜ್’ ಎಂಬ ಹೆಸರಿನಲ್ಲಿ ಈ ಹಾಡನ್ನು ಮತ್ತೆ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಇದನ್ನು ಕೇಳಿ ಅಲ್ಲು ಅರ್ಜುನ್ ಅಭಿಮಾನಿಗಳು ಖುಷಿಯಿಂದ ಕುಣಿದಾಡಿದ್ದರು.
ಇದನ್ನೂ ಓದಿ: Plane Crash : ದಕ್ಷಿಣ ಕೊರಿಯಾದಲ್ಲಿ ಭೀಕರ ವಿಮಾನ ದುರಂತ; ಬದುಕುಳಿದವರು ಕೇವಲ ಇಬ್ಬರೇ- ಸಾವಿನ ಸಂಖ್ಯೆ 179ಕ್ಕೆ ಏರಿಕೆ
ಇದೀಗ ‘ದಮ್ಮುಂಟೆ ಪಟ್ಟುಕೋರ’ ಡೈಲಾಗ್ ಇದೀಗ ರಿಮಿಕ್ಸ್ ಹಾಡು ರಿಲೀಸ್ ಆಗುವ ಮೂಲಕ ಭಾರತೀಯ ಸಿನೆಮಾದಲ್ಲೇ ಈ ವರ್ಷದ ಅತೀ ಹೆಚ್ಚಿನ ಕಲೆಕ್ಷನ್ ಮಾಡಿರುವ ಪುಷ್ಪ-2 ಇನ್ನೂ ಥಿಯೇಟರ್ ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ದಮ್ಮುಂಟೆ ಪಟ್ಟುಕೋರ ಡೈಲಾಗ್ ನಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪ ಪಾತ್ರ ಪೊಲೀಸ್ ಅಧಿಕಾರಿ ಪಾತ್ರ ಭನ್ವರ್ ಸಿಂಗ್ ಪಾತ್ರಕ್ಕೆ ಟಾಂಟ್ ಕೊಡುವ ಸೀನ್ ಇದಾಗಿದೆ. ಪುಷ್ಪ-2 ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಉಂಟಾಗಿದ್ದ ಕಾಲ್ತುಲಿತ ಘಟನೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೆ ನಟ ಅಲ್ಲು ಅರ್ಜನ್ ಅವರನ್ನು ಪೊಲೀಸರು ಬಂಧಿಸಿ ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಈ ಘಟನೆ ಬಳಿಕ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತ್ತು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ಈ ಕಾಲ್ತುಳಿತ ಪ್ರಕರಣದ ಸಂಪೂರ್ಣ ಹೊಣೆಯನ್ನು ಅಲ್ಲು ಅರ್ಜುನ್ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದ್ದರು.