Sunday, 5th January 2025

Rashmika Mandanna: ಬಹಳ ಅನ್‌ಕಂಫರ್ಟ್‌ ಫೀಲ್‌ ಆಗಿತ್ತು… ಪುಷ್ಪ-2 ಪೀಲಿಂಗ್ಸ್ ಡ್ಯಾನ್ಸ್ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್‌ ಹೇಳಿಕೆ

Rashmika Peelings Dance Song

ಹೈದರಾಬಾದ್: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ನಟನೆಯ  ಪುಷ್ಪ 2 ಚಿತ್ರ ಬಿಡುಗಡೆಯಾಗಿ  ಗಲ್ಲಾಪೆಟ್ಟಿಗೆಯಲ್ಲಿ ಡಬಲ್ ಕಲೆಕ್ಷನ್‌ ಮಾಡ್ತಿದೆ. ಪುಷ್ಪ ಫಸ್ಟ್ ಪಾರ್ಟ್ ನೋಡಿದ್ದ ಅಭಿಮಾನಿಗಳಂತೂ ಪಾರ್ಟ್ 2 ಗೆ ಮೋಸ್ಟ್ ವೈಟಿಂಗ್‌ನಲ್ಲಿದ್ರು. ಇದೀಗ  ಪುಷ್ಪ 2 ರಿಲೀಸ್ ಆಗಿದ್ದು  ಅಭಿಮಾನಿಗಳು ಪುಷ್ಪ 2ಗೂ ಫೈರ್ ಬಾಂಡ್ ಅನ್ನುತ್ತಿದ್ದಾರೆ. ಇದೀಗ  ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅವರ‌  ಪೀಲಿಂಗ್ಸ್  ಸಾಂಗ್‌ನ  ಡ್ಯಾನ್ಸ್(Pushpa 2’s Rashmika Peelings Dance) ಕುರಿತಾಗಿಯೂ ಮಾತುಕತೆ ಜೋರಾಗಿದೆ. ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರು  ಮಸ್ತ್  ಆಗಿ ಡ್ಯಾನ್ಸ್​ ಮಾಡಿದ್ದಾರೆ.

ಇನ್ನು ಅಲ್ಲು ಅರ್ಜುನ್ ಕಾಲು ಹಿಡಿದು ರಶ್ಮಿಕಾ ಈ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ರಶ್ಮಿಕಾನ ಮೇಲಕೆತ್ತಿ ಮಾಡಿರುವ ಸ್ಟೆಪ್ಸ್  ಕೂಡ ಇದರಲ್ಲಿದೆ. ಈ ಬಗ್ಗೆ ಕೆಲವರು ಇದು ಯಾವ್ ಟೈಪ್ ನ  ಡ್ಯಾನ್ಸ್ ಎಂದು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವೊಬ್ರು ಯಾಕೆ ಇಷ್ಟೊಂದು ಎಕ್ಸ್‌ಪೋಸ್‌ ಮಾಡೋದು ಅಂತ ಪ್ರಶ್ನೆ ಮಾಡಿದ್ದಾರೆ.

ಟೀಕೆಗೂ ಗುರಿಯಾಗಿತ್ತು

ಪುಷ್ಪ 2 ದಿ ರೂಲ್ ಚಿತ್ರದ ಪೀಲಿಂಗ್ಸ್ ಹಾಡು  ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಹಿಂದಿ ಭಾಷೆಗಳಲ್ಲಿಯೂ ಪೀಲಿಂಗ್ಸ್ ಹಾಡು ಸದ್ದು ಮಾಡಿದೆ. ಆದರೆ ಪುಷ್ಪಾ 2 ಹಾಡಿನ ‘ಪೀಲಿಂಗ್ಸ್’ ಬಗ್ಗೆ  ಕೆಲವೊಬ್ಬರು ಸಖತ್ ಡ್ಯಾನ್ಸ್ ಅಂದ್ರೆ ಇನ್ನೂ ಕೆಲವೊಬ್ಬರು ಟೀಕೆ ವ್ಯಕ್ತಪಡಿಸಿದ್ದಾರೆ. ಏನಿದು? ರಶ್ಮಿಕಾ ಅವತಾರ ಎಂದು ಕೆಲವೊಬ್ರು ಕಾಮೆಂಟ್ ಮಾಡಿದ್ದರು.

ಹೈ ಬಜೆಟ್ ಸಿನಿಮಾ

ಸುಮಾರು 250 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಪುಷ್ಪ  ಸಿನಿಮಾದ ಮೊದಲ ಭಾಗ  400 ಕೋಟಿಗೂ ಹೆಚ್ಚು ಆದಾಯ ಗಿಟ್ಟಿಸಿಕೊಂಡಿತ್ತು.‌ ಇದೀಗ  3 ವರ್ಷಗಳ ನಂತರ ಪುಷ್ಪ ಚಿತ್ರದ ಎರಡನೇ ಭಾಗ ಮೂಡಿಬಂದಿದ್ದು ಪುಷ್ಪ 2 ಸಿನಿಮಾ ಬಾಲಿವುಡ್ ಸಿನಿಮಾ ದಾಖಲೆಗಳನ್ನು ಕೂಡ ಮುರಿದಿದೆ. ಒಂದೇ ವಾರದಲ್ಲಿ ಸಾವಿರ ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿ ಹೊಸ ದಾಖಲೆ  ನಿರ್ಮಿಸಿದೆ.

ರಶ್ಮಿಕಾ ಹೇಳಿದ್ದೇನು?

ರಿಹರ್ಸಲ್ ವೀಡಿಯೊ ಬಗ್ಗೆ ಮಾತನಾಡುವ ಸಂದರ್ಭದಲ್ಲಿ  ಈ ಪಿಲಿಂಗ್ಸ್ ಹಾಡಿನ ಬಗ್ಗೆ  ಪ್ರತಿಕ್ರಿಯೆಯನ್ನು ಹಂಚಿಕೊಂಡ ನಟಿ, ಇದು ಸುಲಭವಾಗಿ ಇರಲಿಲ್ಲ ಆದರೆ  ಅದನ್ನು ಸವಾಲಾಗಿ ತೆಗೆದುಕೊಂಡು ಶಾಟ್ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ನನಗೂ ಈ ಡ್ಯಾನ್ಸ್ ಬಗ್ಗೆ ಅನ್‌ಕಂಪರ್ಟ್‌ನೆಸ್‌ ಇತ್ತು. ಈ ಡ್ಯಾನ್ಸ್ ನಲ್ಲಿರುವ ಸ್ಟೆಪ್ ನನಗೆ ಸಾಧ್ಯವೇ? ನಾನು ಇದನ್ನು ಹೇಗೆ ನಿಭಾಯಿಸಲಿದ್ದೇನೆ ಎಂಬ ವಿಚಾರ  ನನ್ನ ತಲೆಯಲ್ಲಿತ್ತು ಎಂದಿದ್ದಾರೆ.  ಹಾಡು ಮತ್ತು ನೃತ್ಯ ಸಂಯೋಜನೆಯ ಬಗ್ಗೆ ಅನುಮಾನವಿದೆಯೇ ಎಂದು  ಕೇಳಿದಾಗ  ತನ್ನನ್ನು ತಾನು ಅನುಮಾನಿಸಿದರೆ ನಟನಾಗುವುದು ಅಸಾಧ್ಯ ಎಂಬ ಕಾರಣಕ್ಕೆ ತಾನು ಅನುಮಾನಿಸಲು ಅವಕಾಶ ನೀಡಲಿಲ್ಲ ಎಂದು ನಟಿ ಹೇಳಿದ್ದಾರೆ.

ರಶ್ಮಿಕಾ ಲಕ್ ಬದಲಾಯಿಸಿದ ಚಿತ್ರ

ಇದೀಗ ಪಾರ್ಟ್‌ 1ಕ್ಕೆ ಕಾಪೇರ್ ಮಾಡಿದ್ರೆ  ಪಾರ್ಟ್ 2ರಲ್ಲಿ ನಟಿ ರಶ್ಮಿಕಾ  ಮತ್ತಷ್ಟು  ಶೈನ್ ಆಗಿ ಮಿಂಚಿದ್ದಾರೆ. ಥಿಯೇಟರ್ ನಲ್ಲಿ ರಾಶ್ಮಿಕಾ  ಬೋಲ್ಡ್ ಲುಕ್ ,ಆ್ಯಕ್ಟಿಂಗ್ ಗೆ  ಅಭಿಮಾನಿಗಳು  ಸಿಳ್ಳೆ ಹೊಡೆಯುವಷ್ಟು  ಕ್ರೇಜ್ ಹುಟ್ಟಿಸಿದೆ.‌ ಪುಷ್ಪ ಚಿತ್ರದ ನಟನೆಯಂದಾಗಿ ರಶ್ಮಿಕಾ ಲಕ್ ಇನ್ನಷ್ಟು ಹೆಚ್ಚಾಗುವಂತಿದೆ. ಈ ಸಿನಿಮಾಕ್ಕೆ ರಶ್ಮಿಕಾ 10 ಕೋಟಿ ಸಂಭಾವನೆ ಪಡೆದಿದ್ದಾರಂತೆ ಎನ್ನುವ ಸುದ್ದಿಯೂ ವೈರಲ್ ಆಗುತ್ತಿದೆ.

ಇದನ್ನು ಓದಿ:ಗುಜರಾತ್​ನಲ್ಲಿ ಐಪಿಎಸ್​ ಅಧಿಕಾರಿ ಪತ್ನಿ ಆತ್ಮಹತ್ಯೆ