Thursday, 19th December 2024

Rahul Gandhi: ಸಂಸದೆ ಜೊತೆಗೆ ರಾಹುಲ್‌ ಗಾಂಧಿ ಅನುಚಿತ ವರ್ತನೆ? ರಾಜ್ಯಸಭಾ ಸ್ಪೀಕರ್‌ಗೆ ದೂರು

ನವದೆಹಲಿ: ಪ್ರತಿಭಟನೆಯ ವೇಳೆ ಸಂಸತ್ತಿನಲ್ಲಿ ರಾಹುಲ್ ಗಾಂಧಿ(Rahul Gandhi) ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು(Misbehaved). ಅವರ ನಡವಳಿಕೆ ತನಗೆ ತೀವ್ರ ಮುಜುಗರವನ್ನುಂಟು ಮಾಡಿದೆ ಎಂದು ಸಂಸದೆಯೊಬ್ಬರು ಆರೋಪಿಸಿದ್ದಾರೆ.

ನಾಗಾಲ್ಯಾಂಡ್‌ನ(Nagaland) ಬಿಜೆಪಿ ಸಂಸದೆ ಫಾಂಗ್ನಾನ್ ಕೊನ್ಯಾಕ್(Phangnon Konyak) ಅವರು ಗುರುವಾರ(ಡಿ.19) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ರಾಜ್ಯಸಭಾ ಸ್ಪೀಕರ್‌ಗೆ ದೂರು ಸಲ್ಲಿಸಿದ್ದು, “ಬೆಳಗ್ಗೆ ಸಂಸತ್ತಿನ ಹೊರಗೆ ಎರಡೂ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದಾಗ ತುಂಬಾ ಹತ್ತಿರದಲ್ಲಿ ನಿಂತು ಅನುಚಿತವಾಗಿ ವರ್ತಿಸಿ ನನಗೆ ಮುಜುಗರ ತರಿಸಿದ್ದಾರೆ” ಎಂದು ಆರೋಪಿಸಿರುವ ಮಾಹಿತಿಯಿದೆ.

“ಮಕರ ದ್ವಾರದ ಮೆಟ್ಟಿಲ ಕೆಳಗೆ ನಾನು ಕೈಯಲ್ಲಿ ನಾಮ ಫಲಕ ಹಿಡಿದು ನಿಂತಿದ್ದೆ, ಭದ್ರತಾ ಸಿಬ್ಬಂದಿ ಸುತ್ತುವರಿದು ಇತರ ಪಕ್ಷಗಳ ಸಂಸದರು ಬರುವ ಕ್ಷಣಕ್ಕೆ ಪ್ರವೇಶ ದ್ವಾರವನ್ನು ನಿರ್ಮಿಸಿದ್ದರು. ಇದ್ದಕ್ಕಿದ್ದಂತೆ ವಿರೋಧ ಪಕ್ಷದ ನಾಯಕ , ಶ್ರೀ ರಾಹುಲ್ ಗಾಂಧಿ ಅವರು ಇತರ ಪಕ್ಷದ ಸದಸ್ಯರೊಂದಿಗೆ ನನ್ನ ಎದುರಿಗೆ ಬಂದರು. ಅವರಿಗಾಗಿ ಬೇರೆ ಮಾರ್ಗವಿದ್ದಾಗಲೂ!” ಎಂದು ಪತ್ರದಲ್ಲಿ ಸಂಸದೆ ತಿಳಿಸಿದ್ದಾರೆ. “ಅವರು ನನ್ನೊಂದಿಗೆ ಜೋರು ಧ್ವನಿಯಲ್ಲಿ ಅನುಚಿತವಾಗಿ ವರ್ತಿಸಿದರು. ಅವರ ದೈಹಿಕ ಸಾಮೀಪ್ಯದಿಂದ ನನಗೆ ತುಂಬಾ ಮುಜುಗರವಾಯಿತು” ಎಂದು ಹೇಳಿದ್ದಾರೆ. ಕೊನ್ಯಾಕ್ ತಮ್ಮ ದೂರಿನಲ್ಲಿ,ತುಂಬಾ ಬೇಸರದಿಂದ ನಾನು ದೂರ ಸರಿದೆ. ನನ್ನ‌ ಹಕ್ಕುಗಳ ಪರ ಧ್ವನಿ ಎತ್ತಿದ್ದೇನೆ. ಯಾವುದೇ ಸಂಸದರು ಈ ರೀತಿ ವರ್ತಿಸಬಾರದು” ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಪ್ರತಿಭಟನೆ ವೇಳೆ ಬಿಜೆಪಿ ಸಂಸದರಿಬ್ಬರಿಗೆ ಗಂಭೀರ ಗಾಯ; ICUನಲ್ಲಿ ಚಿಕಿತ್ಸೆ

ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್(BR Ambedkar) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ರಾಜ್ಯಸಭೆಯಲ್ಲಿ(Rajyasabha) ನೀಡಿದ ಹೇಳಿಕೆಯು ಪ್ರತಿಪಕ್ಷಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಎರಡು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇಂದು(ಡಿ.19) ಕೂಡ ಸಂಸತ್ ಭವನದ ಎದುರು ಕಾಂಗ್ರೆಸ್‌ ಮತ್ತು ಬಿಜೆಪಿಯ ಹೈಡ್ರಾಮಾ ನಡೆಸಿದೆ(Ambedkar Row). ಈ ವೇಳೆ ಪ್ರತಾಪ್‌ ಚಂದ್ರ ಸಾರಂಗಿ ಸೇರಿದಂತೆ ಇಬ್ಬರು ಬಿಜೆಪಿ ಸಂಸದರಿಗೆ ಗಂಭೀರ ಗಾಯಗಳಾಗಿವೆ. ಇನ್ನು ವಿಪಕ್ಷ ನಾಯಕರು ರಾಹುಲ್‌ ಗಾಂಧಿಯೇ ಅವರನ್ನು ತಳ್ಳಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಇದೀಗ ಅವರ ವಿರುದ್ಧ FIR ದಾಖಲಿಸಲು ಬಿಜೆಪಿ ಮುಂದಾಗಿದೆ.

ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಪ್ರತಿಭಟನಾ ಮೆರವಣಿಗೆ ಇಂದು ಮುಖಾಮುಖಿಯಾಗಿದೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ(Pratap Sarangi) ಅವರು ಆಯತಪ್ಪಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ನನ್ನನ್ನು ಹಿಡಿದು ತಳ್ಳಿದರು ಎಂದು ಸಂಸದ ಸಾರಂಗಿ ಅವರು ಆರೋಪಿಸಿದ್ದಾರೆ. ಆದರೆ ಆರೋಪವನ್ನು ತಳ್ಳಿಹಾಕಿರುವ ರಾಹುಲ್ ಗಾಂಧಿ ನಾನು ತಳ್ಳಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Pratap Chandra Sarangi: ಪ್ರತಿಭಟನೆ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಪ್ರತಾಪ್‌ ಸಾರಂಗಿ ಯಾರು? ಇವರ ಹಿನ್ನೆಲೆ ಏನು?