Monday, 25th November 2024

ಕೇಂದ್ರದ ದ್ವಿಮುಖ ನೀತಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಕಿಡಿ

ನವದೆಹಲಿ: ರಾಹುಲ್ ಗಾಂಧಿ ಅವರನ್ನು ಮಿಂಚಿನ ವೇಗದಲ್ಲಿ ಅನರ್ಹಗೊಳಿಸಿದರೆ, ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಗುಜರಾತ್ ಸಂಸದರಿಗೆ ಮಾತ್ರ ಅದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಕೇಂದ್ರದ ದ್ವಿಮುಖ ನೀತಿ ಬಗ್ಗೆ ಕಿಡಿಕಾರಿದರು.
ನ್ಯಾಯಾಲಯದಿಂದ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಜೆಪಿಯ ಅಮ್ರೇಲಿ ಸಂಸದ ನಾರಣ ಭಾಯ್ ಭಿಖಾಭಾಯಿ ಕಚಾಡಿಯಾ ಅವರನ್ನು ಉಲ್ಲೇಖಿಸಿ ಖರ್ಗೆ ಈ ರೀತಿ ಹೇಳಿದ್ದಾರೆ. ಕಚಾಡಿಯಾ ಅವರ ಶಿಕ್ಷೆಯನ್ನು ನಂತರ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.
ಗುಜರಾತಿನ ಸೂರತ್ ನ್ಯಾಯಾಲಯವು ಮಾ.ರಂದು ಪ್ರಧಾನಿ ನರೇಂದ್ರ ಮೋದಿಯವರ ಉಪನಾಮವನ್ನು ಇಬ್ಬರು ಪರಾರಿಯಾದ ಉದ್ಯಮಿ ಗಳೊಂದಿಗೆ ಲಿಂಕ್ ಮಾಡಿದ ಭಾಷಣಕ್ಕಾಗಿ ಎರಡು ವರ್ಷಗಳ ಜೈಲು ಶಿಕ್ಷೆ ಯನ್ನು ವಿಧಿಸಿತು. ಒಂದು ದಿನದ ನಂತರ, ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯ ಸ್ಥಾನದಿಂದಲೂ ಅನರ್ಹಗೊಳಿಸಲಾಯಿತು.

ಗುಜರಾತ್ ಸಂಸದರಿಗೆ ಸಂಸತ್ತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಆದರೆ, ಸತ್ಯವನ್ನು ಮಾತನಾಡುವ ವ್ಯಕ್ತಿಯನ್ನು ಸಂಸತ್ತಿನಿಂದ  ಎಂದು ಖರ್ಗೆ ಹೇಳಿದರು.

ಈ ಮೂಲಕ ಮೋದಿ ಆಡಳಿತದಲ್ಲಿ ಯಾರಿಗೆ ಪರಿಹಾರ ಸಿಗುತ್ತಿದೆ, ಯಾರಿಗೆ ಶಿಕ್ಷೆಯಾಗುತ್ತಿದೆ ಎಂಬುದನ್ನು ನೋಡಬಹುದು ಎಂದರು.