Saturday, 7th September 2024

ವಯನಾಡು, ರಾಯ್​ ಬರೇಲಿಯಲ್ಲಿ ಗೆದ್ದು ಬೀಗಿದ ರಾಹುಲ್​ ಗಾಂಧಿ

ವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ವಯನಾಡು ಮತ್ತು ರಾಯ್​ ಬರೇಲಿ ಕಣಕ್ಕಿಳಿದಿದ್ದ ರಾಹುಲ್​ ಗಾಂಧಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಕೇರಳದ ವಯನಾಡಿನಲ್ಲಿ ರಾಹುಲ್​ ಗಾಂಧಿಯವರು 530498 ಮತಗಳು ಪಡೆದಿದ್ದಾರೆ.

ಕಮ್ಯೂನಿಸ್ಟ್​ ಪಾರ್ಟಿ ಆಫ್​ ಇಂಡಿಯಾದ ಅನ್ನಿ ರಾಜ ಅವರು 239460 ವೋಟ್​ ತೆಗೆದುಕೊಂಡಿದ್ದಾರೆ. ಬಿಜೆಪಿಯ ಕೆ. ಸುರೇಂದ್ರನ್​​ ಅವರು 1 ಲಕ್ಷ ಮತ ಗಳಿಸಿದ್ದಾರೆ.

ರಾಯ್​ ಬರೇಲಿಯಲ್ಲಿ ರಾಹುಲ್​ ಗಾಂಧಿಗೆ 382467 ಮತಗಳು ಲಭಿಸಿವೆ. ಬಿಜೆಪಿ ಅಭ್ಯರ್ಥಿ ದಿನೇಶ್​ ಪ್ರತಾಪ್​ ಸಿಂಗ್​​ ಅವರು 170104 ಮತ ಪಡೆದು ಕೊಂಡಿದ್ದಾರೆ. ಕಳೆದ ಸಲ ರಾಹುಲ್​ ಅಮೇಥಿ ಹಾಗೂ ವಯನಾಡಿನಲ್ಲಿ ಸ್ಪರ್ಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!