Sunday, 15th December 2024

ರಾಜಸ್ಥಾನ ಚುನಾವಣೆ: ಮಧ್ಯಾಹ್ನದವರೆಗೆ ಶೇ.40.27ರಷ್ಟು ಮತದಾನ

ಜೈಪುರ (ರಾಜಸ್ಥಾನ): ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 1 ಗಂಟೆವರೆಗೆ ಶೇ.40.27ರಷ್ಟು ಮತದಾನವಾಗಿದೆ.

199 ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ 25, ಪರಿಶಿಷ್ಟ ಪಂಗಡಕ್ಕೆ 34 ಮತ್ತು ಸಾಮಾನ್ಯ ವರ್ಗಕ್ಕೆ 144 ಸ್ಥಾನಗಳನ್ನು ಮೀಸಲಿಡಲಾಗಿದೆ. ಅಸ್ತಿತ್ವದಲ್ಲಿರುವ ರಾಜಸ್ಥಾನ ವಿಧಾನಸಭೆಯ ಅವಧಿಯು ಜನವರಿ 14, 2024 ರಂದು ಮುಕ್ತಾಯಗೊಳ್ಳಲಿದೆ.