Monday, 14th October 2024

ರಾಜ್ಯಸಭೆಯ ಉಪಚುನಾವಣೆ: ಲೂಯಿಜಿನ್ಹೊ ಫೆಲಿರೊ ಆಯ್ಕೆ

ಕೋಲ್ಕತ್ತ: ಪಶ್ಚಿಮ ಬಂಗಾಳದಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಅಭ್ಯರ್ಥಿಯಾಗಿ ಪಕ್ಷದ ಉಪಾಧ್ಯಕ್ಷ ಲೂಯಿಜಿನ್ಹೊ ಫೆಲಿರೊ ಅವರನ್ನು ಅಭ್ಯರ್ಥಿಯಾಗಿ ಟಿಎಂಸಿ ಆಯ್ಕೆ ಮಾಡಿದೆ.

ಗೋವಾದ ಮಾಜಿ ಮುಖ್ಯಮಂತ್ರಿ ಫೆಲಿರೊ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ ಪಕ್ಷ ತೊರೆದು ಟಿಎಂಸಿಗೆ ಸೇರ್ಪಡೆಯಾಗಿದ್ದರು.

‘ಸಂಸತ್ತಿನ ಮೇಲ್ಮನೆಯ ಚುನಾವಣೆಗೆ ಅಭ್ಯರ್ಥಿಯಾಗಿ ಲೂಯಿಜಿನ್ಹೊ ಫೆಲಿರೊ ಅವರನ್ನು ಹೆಸರಿಸಲು ಸಂತೋಷವಾಗುತ್ತದೆ’ ಎಂದು. ಟಿಎಂಸಿ ಟ್ವೀಟ್‌ ಮಾಡಿದೆ. ಉಪಚುನಾವಣೆಯು ನ.29ರಂದು ನಡೆಯಲಿದೆ.