Saturday, 14th December 2024

ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ನಿಧನ

ಗಾಂಧಿನಗರ: ವಕೀಲ, ಗುಜರಾತ್‌ನ ಬಿಜೆಪಿ ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ಕೋವಿಡ್‍-19 ಸಂಬಂಧಿಸಿದ ಸಮಸ್ಯೆ ಗಳಿಂದ ಚೆನ್ನೈ ನ ಆಸ್ಪತ್ರೆಯಲ್ಲಿ ನಿಧನರಾದರು.

66 ವರ್ಷದ ಭಾರದ್ವಾಜ್‍ ಕಳೆದ ಜೂನ್‌ನಲ್ಲಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ರಾಜ್‌ಕೋಟ್‌ನಲ್ಲಿ ನಡೆದ ರೋಡ್ ಶೋಗೆ ಹಾಜರಾದ ಬಳಿಕ ಆ.31 ರಂದು ಕೊರೊನಾ ವೈರಸ್‌ ಸೋಂಕು ದೃಢಪಟ್ಟಿತ್ತು.

ಸಂಸದ ಅಭಯ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಗುಜರಾತ್‌ನ ರಾಜ್ಯಸಭಾ ಸಂಸದರಾದ ಶ್ರೀ ಅಭಯ್ ಭಾರದ್ವಾಜ್ ವಿಶೇಷ ವಕೀಲರಾಗಿದ್ದರು ಮತ್ತು ಸಮಾಜ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.

ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.