Thursday, 9th January 2025

Ramayana: ಜ. 24ಕ್ಕೆ ʻರಾಮಾಯಣʼ ಚಿತ್ರ ಬಿಡುಗಡೆ

Ramayana

ಮುಂಬೈ: ರಾಮಾಯಣ (Ramayana) ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ “, 1993 ರ ಜಪಾನೀಸ್-ಇಂಡಿಯನ್ ಅನಿಮೆ ಚಲನಚಿತ್ರವು ಜನವರಿ 24 ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ ವಿತರಕರು ಬುಧವಾರ ತಿಳಿಸಿದ್ದಾರೆ. ಚಿತ್ರ ಹಿಂದಿ, ತೆಲುಗು ಮತ್ತು ತಮಿಳು ಡಬ್‌ಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರವನ್ನು ಗೀಕ್ ಪಿಕ್ಚರ್ಸ್ ಇಂಡಿಯಾ, ಅನಿಲ್ ಥಡಾನಿಯ ಎಎ ಫಿಲ್ಮ್ಸ್ ಮತ್ತು ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ವಿತರಿಸಲಿದೆ. ಭಾರತ ಸಿನಿಮಾ ಇಂಡಸ್ಟ್ರಿಯ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಎಸ್‌ಎಸ್ ರಾಜಮೌಳಿ ಅವರ ತಂದೆ ಮತ್ತು ಹಿರಿಯ ಚಿತ್ರಕಥೆಗಾರ ವಿ ವಿಜಯೇಂದ್ರ ಪ್ರಸಾದ್ ಅವರು ಚಿತ್ರಕ್ಕೆ ಹೊಸ ಮೆರಗನ್ನು ನೀಡಿದ್ದಾರೆ. ಕಬೀರ್ ಖಾನ್ ಅವರ ಬಜರಂಗಿ ಭಾಯಿಜಾನ್ (2015), ಮತ್ತು ರಾಜಮೌಳಿಯ ಬಾಹುಬಲಿ ಹಾಗೂ , RRR (2022)ನಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ಕೆಲಸ ಮಾಡಿದ ಖ್ಯಾತಿ ಅವರಿಗಿದೆ.

ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ ಚಿತ್ರವನ್ನು ಯುಗೊ ಸಾಕೊ, ರಾಮ್ ಮೋಹನ್ ಮತ್ತು ಕೊಯಿಚಿ ಸಸಾಕಿ ನಿರ್ದೇಶಿಸಿದ್ದಾರೆ. ಚಿತ್ರದ ಮುಂಚಿನ ಹಿಂದಿ ಆವೃತ್ತಿಯಲ್ಲಿ ರಾಮಾಯಣದ ತಾರೆ ಅರುಣ್ ಗೋವಿಲ್ ರಾಮನ ಪಾತ್ರಕ್ಕೆ ಧ್ವನಿ ನೀಡಿದ್ದರು, ನಮ್ರತಾ ಸಾಹ್ನಿ ಸೀತೆಯ ಪಾತ್ರದಲ್ಲಿ ನಟಿಸಿದರು ಮತ್ತು ದಿವಂಗತ ಅಮರೀಶ್ ಪುರಿ ರಾವಣನಿಗೆ ತಮ್ಮ ಧ್ವನಿಯನ್ನು ನೀಡಿದರು. ಹಿರಿಯ ನಟ ಶತ್ರುಘ್ನ ಸಿನ್ಹಾ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು.

ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ 1993 ರಲ್ಲಿ 24 ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಭಾರತದಲ್ಲಿ ಪ್ರದರ್ಶಿಸಲಾಯಿತು. ಆದರೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರಲಿಲ್ಲ. 2000 ರ ದಶಕದ ಆರಂಭದಲ್ಲಿ ಟಿವಿ ಚಾನೆಲ್‌ಗಳಲ್ಲಿ ಮರುಪ್ರಸಾರವಾದ ನಂತರ ಇದು ಭಾರತೀಯ ಪ್ರೇಕ್ಷಕರಲ್ಲಿ ಜನಪ್ರಿಯವಾಯಿತು.

ಅನಿಮೇಟೆಡ್ ಚಲನಚಿತ್ರವನ್ನು ಆರಂಭದಲ್ಲಿ ಕಳೆದ ವರ್ಷ ಅಕ್ಟೋಬರ್ 18 ರಂದು ಹೊಸ ಡಬ್‌ಗಳೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದೀಗ ಜನವರಿ 24 ರಂದು ಬಿಡುಗಡೆ ಮಾಡಲಾಗುತ್ತಿದ್ದೆ.

ಈ ಸುದ್ದಿಯನ್ನೂ ಓದಿ : Actor Yash: ʼರಾಮಾಯಣʼದಲ್ಲಿ ಅಭಿನಯಿಸುತ್ತಿದ್ದಾರಾ ಯಶ್?‌ ಕೊನೆಗೂ ಮೌನ ಮುರಿದ ರಾಕಿಂಗ್‌ ಸ್ಟಾರ್‌ ಹೇಳಿದ್ದೇನು?

Leave a Reply

Your email address will not be published. Required fields are marked *