Sunday, 15th December 2024

ಲಿಫ್ಟ್‌ ಓಡಾಡುವ ಖಾಲಿ ಜಾಗದಲ್ಲಿ ಕಾಲಿಟ್ಟು ಬಿದ್ದು ಸಾವು

ರಾಂಚಿ: ಲಿಫ್ಟ್‌ನಲ್ಲಿ ಹೋಗಲು ಬಂದ ವ್ಯಕ್ತಿ 4ನೇ ಮಹಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಂಚಿಯಲ್ಲಿ ನಡೆದಿದೆ.

ಲಿಫ್ಟ್ ಬಾಗಿಲು ತೆರೆಯಿತು. ಆದರೆ, ಲಿಫ್ಟ್ ಮಾತ್ರ ಬಂದಿರಲಿಲ್ಲ. ಇದನ್ನು ಗಮನಿಸದ ವ್ಯಕ್ತಿ ಲಿಫ್ಟ್ ಒಳಗೆ ಕಾಲಿಟ್ಟಿದ್ದಾನೆ. ಅಲ್ಲಿ ಲಿಫ್ಟ್‌ ಇಲ್ಲದ ಕಾರಣ ಲಿಫ್ಟ್‌ ಓಡಾಡುವ ಖಾಲಿ ಜಾಗದಲ್ಲಿ ಕಾಲಿಟ್ಟು 4ನೇ ಮಹಡಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ವರದಿಯ ಪ್ರಕಾರ, ಶೈಲೇಶ್ ಕುಮಾರ್ ಎಂದು ಗುರುತಿಸಲಾದ ಅವರು ಲಿಫ್ಟ್‌ನ ಶಾಫ್ಟ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.

ಮಾಹಿತಿ ನೀಡಿದ ಎಸ್ಪಿ, “ಮೃತರು ಶುಕ್ರವಾರ ನೆಲಮಹಡಿಗೆ ಬರಲು ನಾಲ್ಕನೇ ಮಹಡಿಯಲ್ಲಿದ್ದ ಲಿಫ್ಟ್ ಬಟನ್ ಒತ್ತಿದರು, ನಂತರ ತಕ್ಷಣ ಲಿಫ್ಟ್ ಬಾಗಿಲು ತೆರೆದುಕೊಂಡಿತು ಎಂದು ತಿಳಿಸಿದ್ದಾರೆ.