Monday, 4th November 2024

ಎಸ್‌ಎಸ್‌ಬಿ ಮಹಾನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ನೇಮಕ

ವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರನ್ನು ಗಡಿ ಭದ್ರತಾ ಪಡೆ ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರ ಕೇಡರ್‌ನ 1988 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ರಶ್ಮಿ, ಪ್ರಸ್ತುತ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಹೆಚ್ಚುವರಿ ಡಿಜಿ ಆಗಿದ್ದಾರೆ.

ಸಂಪುಟ ನೇಮಕಾತಿ ಸಮಿತಿಯು ರಶ್ಮಿ ಅವರನ್ನು ಎಸ್‌ಎಸ್‌ಬಿಯ ಮಹಾನಿರ್ದೇಶಕರಾಗಿ 2024ರ ಜೂನ್ 30ರ ವರೆಗೆ ನೇಮಕಾತಿಗೆ ಅನುಮೋದಿಸಿದೆ.

ಎಸ್‌ಎಸ್‌ಬಿ ನೇಪಾಳ ಮತ್ತು ಭೂತಾನ್‌ನೊಂದಿಗಿನ ದೇಶದ ಗಡಿ ರಕ್ಷಣೆ ಮಾಡಲಿದೆ.