Thursday, 19th September 2024

ತಮಿಳುನಾಡಿನ ಹಲವೆಡೆ ಭಾರೀ ಮಳೆ: ರೆಡ್ ಅಲರ್ಟ್

ಚೆನ್ನೈ: ತಮಿಳುನಾಡಿನ ಹಲವೆಡೆ ಭಾರೀ ಮಳೆಯಿಂದಾಗಿ ಪಟ್ಟಣ ಪ್ರದೇಶ ಗಳು ಜಲಾವೃತಗೊಂಡಿದ್ದು, ಚೆನ್ನೈ ಮತ್ತು ಪಕ್ಕದ ಮೂರು ಜಿಲ್ಲೇ ಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ತಮಿಳುನಾಡಿನಲ್ಲಿ ಕಳೆದ ರಾತ್ರಿ ಮಳೆಗೆ ಕಂಬ ಉರುಳಿಬಿದ್ದು ವಿದ್ಯುತ್ ಸ್ಪರ್ಶದಿಂದ ಮೂವರು ಮೃತಪಟ್ಟಿದ್ದಾರೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ರಾಮಚಂದ್ರನ್ ತಿಳಿಸಿದ್ದಾರೆ.

ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲೆಪಟ್ಟು ಜಿಲ್ಲಾಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಶಾಲೆಗಳು, ಕಾಲೇಜುಗಳು ಮತ್ತು ಅನಿವಾರ್ಯವಲ್ಲದ ಸರ್ಕಾರಿ ಕಚೇರಿಗಳು ಮುಚ್ಚಲಾಗಿದೆ.

ರಾಜಧಾನಿ ಚೆನ್ನೈನಲ್ಲಿ 20 ಸೆಂ.ಮೀ ಮಳೆಯಾಗಿದ್ದು ಹಲವು ಪ್ರದೇಶಗಳು ನೀರಿನ ಜಲಾವೃತವಾಗಿದ್ದು ಜನಜೀವನ ಅಸ್ತವ್ಯಸ್ಥ ಗೊಂಡಿದೆ. ಚೆನ್ನೈನಾಲ್ಕು ಸುರಂಗ ರಸ್ತೆ ಮಾರ್ಗಗಳನ್ನು ಮುಚ್ಚಲಾಗಿದೆ.

ಮುಂದಿನ ಮೂರು ದಿನಗಳಲ್ಲಿ ಉತ್ತರ ಕರಾವಳಿ ತಮಿಳುನಾಡು ಮತ್ತು ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.