Sunday, 15th December 2024

15 ವರ್ಷ ಹಳೆಯ ಸರ್ಕಾರಿ ವಾಹನಗಳ ನೋಂದಣಿ ರದ್ದು: ಏಪ್ರಿಲ್ 1ರಿಂದ ಅನ್ವಯ

ನವದೆಹಲಿ: ಮಾಲಿನ್ಯ ನಿಯಂತ್ರಿಸಲು ಮತ್ತು ವೃತ್ತಾಕಾರದ ಆರ್ಥಿಕತೆ ಉತ್ತೇಜಿಸಲು, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿಯ ಅಧಿಸೂಚನೆ ಹೊರಡಿಸಿತು. 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಸರ್ಕಾರಿ ವಾಹನಗಳ ನೋಂದಣಿಯನ್ನು ಕಡ್ಡಾಯವಾಗಿ ರದ್ದುಗೊಳಿಸಲಾಗುತ್ತದೆ.

ನೋಂದಣಿಯನ್ನು ನವೀಕರಿಸಿದ (15 ವರ್ಷಗಳ ನಂತರ) ವಾಹನಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಕೇಂದ್ರ ಸರ್ಕಾರದ ವಾಹನಗಳು, ರಾಜ್ಯ ಸರ್ಕಾರದ ವಾಹನಗಳು, ಕೇಂದ್ರಾಡಳಿತ ಪ್ರದೇಶಗಳ ವಾಹನಗಳು, ನಿಗಮಗಳ ವಾಹನಗಳು, ರಾಜ್ಯ ಸಾರಿಗೆಯ ವಾಹನಗಳು, ಪಿಎಸ್‌ಯುಗಳ ವಾಹನಗಳು (ಸಾರ್ವಜನಿಕ ವಲಯದ ಉದ್ಯಮಗಳು) ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ವಾಹನಗಳು 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳನ್ನು ರದ್ದುಗೊಳಿಸ ಬೇಕು. ಈ ಹೊಸ ಆದೇಶವು ಏಪ್ರಿಲ್ 1, 2023 ರಿಂದ ಅನ್ವಯವಾಗುತ್ತದೆ.

ಆದರೆ, ಸೇನೆಯ ವಾಹನಗಳು ಇದರಲ್ಲಿ ಸೇರ್ಪಡೆಯಾಗುವುದಿಲ್ಲ.

ಕಳೆದ ವರ್ಷ ನವೆಂಬರ್‌ನಲ್ಲಿ ರಸ್ತೆ ಸಾರಿಗೆ ಸಚಿವಾಲಯವು ಕರಡು ಪ್ರತಿಯನ್ನು ಬಿಡುಗಡೆ ಮಾಡಿತ್ತು, ಅದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ 15 ವರ್ಷಗಳ ಹಳೆಯ ವಾಹನಗಳನ್ನು ರದ್ದುಗೊಳಿಸಬೇಕು ಎಂದು ಹೇಳಲಾಗಿದೆ. ಈ ನಿಯಮವನ್ನು ನಿಗಮಗಳು ಮತ್ತು ಸಾರಿಗೆ ಇಲಾಖೆಯ ಬಸ್‌ಗಳು ಮತ್ತು ವಾಹನಗಳಿಗೂ ಅನ್ವಯಿಸುತ್ತದೆ ಎಂದು ಹೇಳಲಾಗಿತ್ತು.

ಕಳೆದ ನವೆಂಬರ್‌ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಅವರು, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಜಂಕ್ ಆಗಿ ಪರಿವರ್ತಿಸಲಾಗುವುದು ಎಂದು ಹೇಳಿದ್ದರು.

 
Read E-Paper click here