Monday, 25th November 2024

ಟಿವಿ ರೇಟಿಂಗ್ ದುರ್ಬಳಕೆ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಬಂಧನ

ಮುಂಬೈ: ಟಿವಿ ರೇಟಿಂಗ್ ದುರ್ಬಳಕೆ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿ ಅವರನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಇದೇ ಪ್ರಕರಣಕ್ಕೆ ವಿಚಾರಣೆಗಾಗಿ ಕರೆಸಲಾಗುತ್ತಿತ್ತು. ಈಗ ಹೆಚ್ಚಿನ ವಿಚಾರಣೆಗಾಗಿ ಬಂಧಿಸಲಾಗಿದೆ ಎನ್ನಲಾಗಿದೆ. ಕೆಲವು ಟೆಲಿವಿಷನ್ ಚಾನೆಲ್ ಗಳು ಟಿಆರ್ ಪಿ ಸಂಖ್ಯೆಗಳನ್ನು ರಿಗ್ಗಿಂಗ್ ಮಾಡುತ್ತಿದೆ ಎಂದು ಆರೋಪಿಸಿ ರೇಟಿಂಗ್ ಏಜೆನ್ಸಿ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ಕಳೆದ ತಿಂಗಳು ದೂರು ದಾಖಲಿಸಿದ್ದರಿಂದ ಈ ನಕಲಿ ಟಿಆರ್ ಪಿ ಹಗರಣ ಬೆಳಕಿಗೆ ಬಂದಿದೆ.