Monday, 16th September 2024

ಗಾಜಾ ಕದನ ವಿರಾಮವನ್ನು ಗೌರವಿಸುವುದು ಎಲ್ಲರ ಹೊಣೆ

ಜೊನಾಥನ್ ಜಡ್ಕಾ, ಇಸ್ರೇಲ್ ಕಾನ್ಸುಲ್ ಜನರಲ್, ದಕ್ಷಿಣ ಭಾರತ

ಇಸ್ರೇಲ್‌ನ ಗಾಜದಲ್ಲಿ ಕದನ ಸ್ಥಗಿತಗೊಂಡ ಬಳಿಕ ನಾವು ಬಲು ಸೂಕ್ಷ್ಮ ಹಾಗೂ ನಾಜೂಕಿನ ಸನ್ನಿವೇಶವನ್ನು ಎದುರಿಸು ತ್ತಿದ್ದೇವೆ. ಈ ಅವಧಿಯಲ್ಲಿ ಅಲ್ಲಿನ ಭಯೋತ್ಪಾದಕ ಸಂಘಟನೆಯವರು ಕದನವಿರಾಮವನ್ನು ಕಾಯಾ ವಾಚಾ ಮನಸಾ ಗೌರವಿಸುತ್ತಾರೆ ಮತ್ತು ಪಾಲಿಸುತ್ತಾರೆ ಎಂಬ ಆಶಯ ನಮ್ಮದಾಗಿದೆ.

ನಾಗರಿಕರ ನೆಲೆಗಳ ಮೇಲೆ ಮನಸೋ ಇಚ್ಛೆ ರಾಕೆಟ್ ದಾಳಿಯನ್ನು ನಿಲ್ಲಿಸುತ್ತಾರೆ ಎಂಬ ಸದಿಚ್ಛೆಯನ್ನೂ ನಾವು ಹೊಂದಿದ್ದೇವೆ.
ಭದ್ರತೆ ಕುರಿತಾದ ನಾನಾ ಸಂಸ್ಥೆಗಳು ಮಾಡಿರುವ ಶಿಫಾರಸುಗಳನ್ನು ಇಸ್ರೇಲಿನ ಭದ್ರತಾ ಸಂಪುಟವು ಕಳೆದ ರಾತ್ರಿ ಸರ್ವಾನುಮತ ದಿಂದ ಅಂಗೀಕರಿಸಿದೆ. ಐಡಿಎಸ್ ಮುಖ್ಯಸ್ಥ ಹಾಗು ಐಎಸ್‌ಎ ವರಿಷ್ಠ, ಮೊಸಾದ್‌ನ ಹಿರಿಯಾಳುಗಳು ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಇವರೆಲ್ಲ ಈಜಿಪ್ತ್ ಪ್ರಸ್ತಾಪಿಸಿರುವ, ಷರತ್ತುರಹಿತ ಪರಸ್ಪರ ಕದನವಿರಾಮವನ್ನು ಒಪ್ಪಿಕೊಳ್ಳಬೇಕೆಂದು ಶಿಫಾರಸು ಮಾಡಿವೆ.

ಇದುವರೆಗೆ ನಡೆದಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಇಸ್ರೇಲ್‌ನ ಸಾಧನೆಯನ್ನು ಅವು ವಿವರಿಸಿವೆ. ಕೆಲವು ಅಭೂತಪೂರ್ವ ಯಶಸ್ಸು ದೊರಕಿರುವುದನ್ನೂ ಅವು ವಿಶೇಷವಾಗಿ ಪ್ರಸ್ತಾಪಿಸಿವೆ. ಪ್ಯಾಲೆಸ್ತೀನೀಯರ ಈ ಸುತ್ತಿನ ಪ್ರಚೋದನಾತ್ಮಕ ದಾಳಿಯನ್ನು ’ಗಾರ್ಡಿಯನ್ ಆಫ್ ದಿ ವಾಲ್ಸ್’ ಕಾರ್ಯಾಚರಣೆಯ ಮೂಲಕ ಇಸ್ರೇಲಿ ಪಡೆಗಳು ತಡವಿಲ್ಲದೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ. ಮಾತ್ರವಲ್ಲದೆ ಸಂಭಾವ್ಯ ಅಪಾಯವನ್ನು ತಡೆಗಟ್ಟಿದೆ.

ಕಳೆದ ರಾತ್ರಿ ಕದನವಿರಾಮ ಜರಿಗೆ ಬಂದಿದ್ದು, ಅದಾದ ಬಳಿಕ ಯಾವುದೆ ಅಹಿತಕರ ಘಟನೆಗಳು ವರದಿಯಾಗಿಲ್ಲ. ಆದರೆ ಮುಂದಿನ ನಿರ್ಧಾರವು ದಾಳಿಗೊಳಗಾದ ಪ್ರದೇಶಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಹಮಾಸ್ ಸಂಘಟನೆಯು ಜನವಸತಿ ಪ್ರದೇಶಗಳಲ್ಲಿ ಬೀಡುಬಿಟ್ಟಿದೆ. ಅಲ್ಲದೆ ನಾಗರಿಕರನ್ನೇ ತನ್ನ ದಾಳಿಯ ಗುರಿಯಾಗಿಸಿದೆ. ಈ ಕಾರ್ಯಲ್ಲಿ ಸದಾ ಜನರನ್ನೇ ದಾಳವಾಗಿ ಬಳಸಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಕಾನೂನುಗಳ ಘೋರ ಉಲ್ಲಂಘನೆ ಹಾಗೂ ತನ್ನವರ ಸುರಕ್ಷತೆಯನ್ನು ಕೂಡ ಲೆಕ್ಕಿಸದೆ ಹಮಾಸ್ ದಾಳಿ ನಡೆಸಿದರೂ ಇಸ್ರೇಲ್ ಮಾತ್ರ ಸಾಕಷ್ಟು ಸಂಯಮವನ್ನು ಪ್ರದರ್ಶಿಸಿದೆ.

ಪ್ಯಾಲೆಸ್ತೀನಿ ನಾಗರಿಕರಿಗೆ ಜೀವಹಾನಿಯನ್ನು ತಪ್ಪಿಸಲು ಅಥವಾ ಅದು ಕನಿಷ್ಠಮಟ್ಟದಲ್ಲಿರುವಂತೆ ಸಾಕಷ್ಟು ಎಚ್ಚರ
ವಹಿಸಿವೆ. ಇದರಿಂದ ನಮ್ಮ ಕಾರ್ಯಾಚರಣೆಯ ವೆಚ್ಚ ಹೆಚ್ಚಾದರೂ ಅದರ ಬಗ್ಗೆ ಚಿಂತಿಸಿಲ್ಲ. ಹೀಗೆ ಮಾಡುವಾಗ ಇಸ್ರೇಲಿ ಪಡೆಗಳು ಅಂತಾರಾಷ್ಟ್ರಿಯ ನಿಯಮಗಳ ಉಲ್ಲಂಘನೆ ಆಗದಿರುವಂತೆ ಹಾಗೂ ಸಾಮಾನ್ಯವಾಗಿ ಈ ರೀತಿಯ ಮಿಲಿಟರಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಅನುಸರಿಸಲಾಗುವ ಶಿಷ್ಟಾಚಾರಗಳನ್ನು ಚಾಚೂ ತಪ್ಪದೆ ಪಾಲಿಸಿವೆ. ಸಶಸ್ತ್ರ ಸಂಘರ್ಷಗಳ ಅಂತಾರಾಷ್ಟ್ರೀಯ ಕಾನೂನಿಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದೆ ಸಿನಿಕರಂತೆ ವರ್ತಿಸುವ ವೈರಿಗಳನ್ನು ನಿಭಾಯಿಸು ವುದು ಇಸ್ರೇಲಿ ಯೋಧರಿಗೆ ಕಠಿಣ ಸವಾಲಿನ ಕೆಲಸ.

ಆದರೂ ಇಸ್ರೇಲಿ ಮಿಲಿಟರಿ ಪಡೆಗಳು ಅಂತಾರಾಷ್ಟ್ರೀಯ ಕಾನೂನುಗಳನ್ನು ಗೌರವಿಸುತ್ತಿವೆ. ಗಾಜ ನಾಗರಿಕರ ಜೀವಗಳನ್ನು ಒತ್ತೆ
ಇಡುತ್ತಿರುವವರಾರು ಎಂಬುದನ್ನು ನಾವೆಲ್ಲರೂ ಮೊತ್ತ ಮೊದಲನೆಯದಾಗಿ ಯೋಚಿಸಬೇಕು. ತನ್ನ ನಾಗರಿಕರ ಮೇಲೆಯೇ ನಡೆಯುವ ಯುದ್ಧಾಪರಾಧಗಳಿಗೆ ಹಮಾಸ್ ಯಾವುದೇ ಬೆಲೆಯನ್ನು ತೆರುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಬಾರಿ ಪ್ಯಾಲೆಸ್ತೀನಿ ನಾಗರಿಕರು ಪ್ರಾಣ ಕಳೆದುಕೊಂಡಾಗಲೆಲ್ಲ ಅದಕ್ಕೆ ಇಸ್ರೇಲ್ ದೂಷಣೆಗೆ ಒಳಗಾಗಬೇಕಾಗುತ್ತದೆ.

ಹಮಾಸ್ ಸಂಘಟನೆಗೆ ತನ್ನ ಇಂಥ ಹೀನ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಈ ಅಂಶವೆ ಕುಮ್ಮಕ್ಕು ನೀಡು ತ್ತದೆ. ಪರಿಸ್ಥಿತಿ ಬಿಗಡಾಯಿಸಿರುವುದಕ್ಕೆ ಹಾಗೂ ಎರಡೂ ಕಡೆಗಳಲ್ಲಿ ಇಷ್ಟರ ಮಟ್ಟಿನ ಸಾವು ನೊವಿಗೆ ಹಮಾಸ್ ಭಯೋತ್ಪಾದಕ ಸಂಘಟನೆಯೇ ಸಂಪೂರ್ಣ ಹೊಣೆ. ಇದಕ್ಕೆ ಸಂಶಯವಿಲ್ಲ. ಇಸ್ರೇಲಿ ನಾಗರಿಕರ ಮೇಲೆ ನಡೆದ ರಾಕೆಟ್ ದಾಳಿಯನ್ನು ಆಂತಾರಾಷ್ಟ್ರೀಯ ಸಮುದಾಯ ಖಂಡಿಸಬೇಕು. ಅಲ್ಲದೆ ತನ್ನ ನಾಗರಿಕರ ರಕ್ಷಣೆಯ ಹಕ್ಕು ಇಸ್ರೇಲಿಗೆ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಹಿಂಸಾಚಾರಕ್ಕೆ ಪ್ರಚೋದನೆ ಕೊಡುತ್ತಿರುವ ಪ್ಯಾಲೆಸ್ತೀನೀಯರನ್ನು ಹಾಗೆ ಮಾಡದಿರುವಂತೆ ತಡೆಯಬೇಕು.

ಗಾಜದ ಸಂಘಟನೆಗಳು ನಡೆಸಿದ ಹಿಂಸಾಚಾರದ ಸರಣಿ ಇಲ್ಲಿಗೆ ಕೊನೆಗೊಳ್ಳಲಿ. ಗಾಜದ ಜನರಿಗೆ ಉತ್ತಮ ನಾಗರಿಕ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ಅವರು ಗಂಭೀರ ಪ್ರಯತ್ನಗಳನ್ನು ಮಾಡಲಿ ಎಂಬುದೇ ಇಸ್ರೇಲಿನ ಆಶಯವಾಗಿದೆ. ಸದ್ಯಕ್ಕೆ ನಮ್ಮ ಪ್ರದೇಶದ ಶಾಂತಿ ಮತ್ತು ಭದ್ರತೆಗಾಗಿ ನಾವು ಪ್ರಾರ್ಥಿಸುತ್ತೇವೆ. ಪ್ಯಾಲೆಸ್ತೀನೀಯರ ಈ ಸುತ್ತಿನ ಪ್ರಚೋದನಾತ್ಮಕ ದಾಳಿಯನ್ನು ’ಗಾರ್ಡಿಯನ್ ಆ- ದಿ ವಾಲ್ಸ್’ ಕಾರ್ಯಾಚರಣೆಯ ಮೂಲಕ ಇಸ್ರೇಲಿ ಪಡೆಗಳು ತಡವಿಲ್ಲದೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ. ಕಳೆದ ರಾತ್ರಿ ಕದನವಿರಾಮ ಜರಿಗೆ ಬಂದಿದೆ. ಆದರೆ ಮುಂದಿನ ನಿರ್ಧಾರವು ದಾಳಿಗೊಳಗಾದ ಪ್ರದೇಶಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು
ಅವಲಂಬಿಸಿರುತ್ತದೆ. ತನ್ನ ನಾಗರಿಕರ ಮೇಲೆಯೇ ನಡೆಯುವ ಯುದ್ಧಾಪರಾಧಗಳಿಗೆ ಹಮಾಸ್ ಯಾವುದೇ ಬೆಲೆಯನ್ನು
ತೆರವುದಿಲ್ಲ. ಆದರೆ ಪ್ಯಾಲೆಸ್ತೀನಿ ನಾಗರಿಕರು ಪ್ರಾಣ ಕಳೆದುಕೊಂಡಾಗಲೆಲ್ಲ ಇಸ್ರೇಲ್ ದೂಷಣೆಗೆ ಒಳಗಾಗಬೇಕಾಗುತ್ತದೆ.

ಗಾಜದಲ್ಲಿ ಹಿಂಸಾಚಾರ ಸರಣಿ ಇಲ್ಲಿಗೆ ಕೊನೆಗೊಳ್ಳಲಿ. ಗಾಜ ಜನರಿಗೆ ಉತ್ತಮ ನಾಗರಿಕ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ಅವರು ಗಂಭೀರ ಪ್ರಯತ್ನಗಳನ್ನು ಮಾಡಲಿ ಎಂಬುದೇ ಇಸ್ರೇಲಿನ ಆಶಯವಾಗಿದೆ.

Leave a Reply

Your email address will not be published. Required fields are marked *