Thursday, 12th December 2024

ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ: ವೀಡಿಯೋ ವೈರಲ್‌…

ನವದೆಹಲಿ: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ರಾಹುಲ್ ಗಾಂಧಿ ನೈಟ್ ಕ್ಲಬ್ ನಲ್ಲಿ ಸಂತೋಷ ಕೂಟದಲ್ಲಿ ಭಾಗಿಯಾಗಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. ವಿಡಿಯೊದಲ್ಲಿ ಡಿಸ್ಕೊಥೆಕ್ ಕಾಣಿಸಿಕೊಂಡಿದ್ದು, ರಾಹುಲ್ ಗಾಂಧಿಯ ಸುತ್ತಮುತ್ತ ಇರುವವರು ಮದ್ಯ ಸೇವಿಸುತ್ತಿದ್ದಾರೆ.

ಕಠ್ಮಂಡುವಿನಲ್ಲಿ ಸ್ನೇಹಿತನೊಬ್ಬನ ಮದುವೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು ಎಂದು ಹೇಳ ಲಾಗುತ್ತಿದೆ. ಅಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ.

ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ರಾಹುಲ್ ಗಾಂಧಿ ನಂತರ ಮದುವೆ ಔತಣಕೂಟ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ತಮ್ಮ ಮಗಳ ಮದುವೆ ಕಾರ್ಯಕ್ರಮಕ್ಕೆ ರಾಹುಲ್ ಗೆ ಆಹ್ವಾನ ನೀಡಿದ್ದೆ ಎಂದು ಮ್ಯಾನ್ಮಾರ್ ಗೆ ನೇಪಾಳದ ಮಾಜಿ ರಾಯಭಾರಿ ಭಿಮ್ ಉದಾಸ್ ಹೇಳಿರುವುದಾಗಿ ವರದಿಯಾಗಿದೆ.

ಉದಾಸ್ ಮಗಳು ಸುಮ್ಮಿಯಾ ಸಿಎನ್ ಎನ್ ಮಾಜಿ ವರದಿಗಾರ್ತಿಯಾಗಿದ್ದು ನಿಮ ಮಾರ್ಟಿನ್ ಶೆರ್ಪ ಅವರನ್ನು ವಿವಾಹವಾಗಿದ್ದಾರೆ.  ರಾಹುಲ್ ಗಾಂಧಿಯವರು ಭಾಗವಹಿಸಿದ್ದ ನೈಟ್ ಕ್ಲಬ್ ಲಾರ್ಡ್ ಆಫ್ ರಿಂಗ್ಸ್ ನಲ್ಲಿದೆ.