Thursday, 19th September 2024

ಬಂದೂಕಿನಿಂದ ಮಿಸ್ ಫೈರಿಂಗ್: ಎಸ್‌ಪಿಎಫ್ ಪೇದೆ ಸಾವು

ಹೈದರಾಬಾದ್: ಸ್ಪೆಷಲ್ ಪ್ರೊಟಕ್ಷನ್ ಪೋರ್ಸ್’ಗೆ ಸೇರಿದ ಪೇದೆಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಬಂದೂಕಿ ನಿಂದ ಮಿಸ್ ಫೈರಿಂಗ್ ಆಗಿ ಮೃತಪಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ರಾಣಿಗುಂಜ್ ಏರಿಯಾದ ಸಾರ್ವಜನಿಕ ವಲಯದ ಬ್ಯಾಂಕ್ ಹತ್ತಿರ ಕರ್ತವ್ಯ ನಿರತವಾಗಿದ್ದ ಕಾನ್ಸ್ ಟೇಬಲ್, ಸೆಲ್ಫ್ ಲೋಡಿಂಗ್ ರೈಫಲ್’ ನಿಂದ ಮಿಸ್ ಫೈರಿಂಗ್ ಉಂಟಾಗಿ, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಕುರಿತಂತೆ ಸೆಕ್ಯೂರಿಟಿ ಆಫೀಸರ್ ಮೇಲ್ವಿಚಾರಕರು ಮಾಹಿತಿ ನೀಡಿದ್ದು, ಕಾನ್ಸ್ ಟೇಬಲ್ ಎಸ್ ಎಲ್ ಆರ್ ಬಂದೂಕಿನಿಂದ ಮಿಸ್ ಫೈರಿಂಗ್ ಆಗಿದ್ದರಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.