ಬಸ್ ಚಾಲಕನ ಮಗನಾದ ಯಶ್ (Yash) ಕೆಜಿಎಫ್ (KGF)) ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಕಠಿಣ ಪರಿಶ್ರಮದಿಂದ ಇಷ್ಟು ಎತ್ತರಕ್ಕೆ ಬೆಳೆದಿರುವ ಯಶ್ ಅವರ ಮೊದಲ ಸಂಭಾವನೆ ನೂರುಗಳಲ್ಲಿತ್ತು. ಸದ್ಯದ ವರದಿಗಳ ಪ್ರಕಾರ, ಕೆಜಿಎಫ್ ಸರಣಿಗಳ ಬಳಿಕ ಯಶ್ ಸಿನಿಮಾವೊಂದಕ್ಕೆ 25ರಿಂದ 30 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇದಲ್ಲದೇ ಸಿನಿಮಾ ನಿರ್ಮಾಣಕ್ಕೂ ಅವರು ಕೈಹಾಕಿದ್ದು, ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿರುವ (Rocking Star Birthday) ರಾಕಿಂಗ್ ಸ್ಟಾರ್ ಯಶ್ ಅವರು ಪಡೆಯುತ್ತಿರುವ ಸಂಭಾವನೆಗಳ ಬಗ್ಗೆ ನೋಡೋದಾದ್ರೆ.
ಯಶ್ ಬೆಂಗಳೂರಿನಲ್ಲಿ ಆರು ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಜೊತೆಗೆ ಹುಟ್ಟೂರು ಹಾಸನದಲ್ಲಿ ಫಾರ್ಮ್‌ಹೌಸ್ ಸೇರಿದಂತೆ ಆಸ್ತಿ ಹೊಂದಿದ್ದಾರೆ. ಬೆಂಗಳೂರಿನ ಹೊಸಕೆರೆಯಲ್ಲಿ ವಿಶಾಲ ಮನೆ ಹೊಂದಿದ್ದಾರೆ. ಇದಲ್ಲದೇ ಗೋವಾದಲ್ಲೊಂದು ಮನೆ ಹಾಗೂ ಬೆಂಗಳೂರಿನ ತಾಜ್ ವೆಸ್ಟೆಂಡ್‌ನಲ್ಲಿ ಪ್ರತ್ಯೇಕ್ ರೂಮ್ ಇದೆ.
ಯಶ್ ಕಂಪನಿ
ರಾಕಿಂಗ್ ಸ್ಟಾರ್ ವಿಲ್ಲಾನ್ ಎಂಬ ಕಂಪನಿ ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಬಿಯಡೋ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆಂದು ಸ್ಟಾಕ್ ಗೋ (Star go) ಎಕ್ಸ್ (x) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಯಶ್ ಅವರ ಬಳಿ 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯಿದೆ ಎಂದು ಅಂದಾಜಿಸಲಾಗಿದೆ. ಕೆಜಿಎಫ್ ಚಿತ್ರದ ಮೂಲಕ ಯಶ್ ಭಾರತೀಯ ಚಿತ್ರರಂಗ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಯಶ್ ಚಿತ್ರದ ಮೇಲೆ ಕೇವಲ ಸ್ಯಾಂಡಲ್‌ವುಡ್ (Sandalwood) ಮಾತ್ರವಲ್ಲ, ಭಾರತದ ಎಲ್ಲಾ ಚಿತ್ರರಂಗ ಕಣ್ಣಿಟ್ಟಿದೆ.
ಈ ಸುದ್ದಿಯನ್ನೂ ಓದಿ: Yash Birthday: ರಾಕಿಂಗ್ ಸ್ಟಾರ್ ಯಶ್‌ಗೆ ಜನ್ಮದಿನದ ಸಂಭ್ರಮ; ರಾಕಿ ಭಾಯ್ ಎಷ್ಟು ಆಸ್ತಿ ಹೊಂದಿದ್ದಾರೆ?