Thursday, 19th September 2024

ಮಾಸ್ಕ್‌ ಧರಿಸುವಲ್ಲಿ ಉಡಾಫೆ ತೋರಿದರೆ ‘ರೊಕೊ ಟೊಕೊ’ ಶಿಕ್ಷೆ!

ಗ್ವಾಲಿಯರ್​: ಮಾಸ್ಕ್ ಧರಿಸದೇ ಉಡಾಫೆಯಿಂದ ಅಡ್ಡಾಡುವವರಿಗೆ ಮಧ್ಯಪ್ರದೇಶದ ಗ್ವಾಲಿಯರ್​ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲೇಂದ್ರ ವಿಕ್ರಮ್ ಸಿಂಗ್ ವಿಧಿಸಿದ ಶಿಕ್ಷೆ ದೇಶದ ಗಮನ ಸೆಳೆದಿದೆ. ಕರೊನಾ ವೈರಸ್ ತಡೆಯುವುದಕ್ಕಾಗಿ ಅಲ್ಲಿನ ಜಿಲ್ಲಾಡಳಿತ ‘ರೊಕೊ ಟೊಕೊ’ ಅಭಿಯಾನ ಶುರುಮಾಡಿದೆ.

ನಿಯಮ ಉಲ್ಲಂಘಕರನ್ನು ಬಯಲು ಬಂಧೀಖಾನೆಯಲ್ಲಿ ಬಿಡಲಾಗುತ್ತದೆ. ಅಲ್ಲಿ ಅವರು ಕರೊನಾ ವೈರಸ್ ಬಗ್ಗೆ ಪ್ರಬಂಧ ಬರೆಯಬೇಕು. ಬರೆದರಷ್ಟೇ ಅವರಿಗೆ ಬಿಡುಗಡೆ. ಹೀಗೊಂದು ದಂಡನೆ ಕಳೆದ ಶನಿವಾರದಿಂದಲೇ ಆರಂಭವಾಗಿದ್ದು, ಕನಿಷ್ಠ 20 ನಿಯಮ ಉಲ್ಲಂಘಕರು ಈ ಶಿಕ್ಷೆ ಅನುಭವಿಸಿದ್ದಾರೆ.

ಗ್ವಾಲಿಯರ್​ನಲ್ಲಿ ಅನೇಕರು ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದಾರೆ. ಬಹುತೇಕರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ.  ಫೇಸ್ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಕತ್ತಿಗೆ ಮಾಸ್ಕ್ ಹಾಕಿಕೊಂಡು ಕಾನೂನು ಪಾಲಕರ ಕಣ್ಣೆದುರು ಮುಖಕ್ಕೇರಿಸಿ ಕೊಳ್ಳುತ್ತಾರೆ. ಈ ರೀತಿ ನಿಯಮ ಉಲ್ಲಂಘನೆ ತಡೆಯುವುದಕ್ಕೆ ಹೊಸ ದಂಡನೆಯ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

Leave a Reply

Your email address will not be published. Required fields are marked *