Monday, 11th November 2024

ಅಳಿಯ – ಅತ್ತೆಯ ರೋಮ್ಯಾನ್ಸ್: ಎಲ್ಲರ ಸಮ್ಮುಖದಲ್ಲಿ ಮದುವೆ ಮಾಡಿಸಿದ ’ಮಾವ’

ಪಾಟ್ನಾ: ಬಿಹಾರ ರಾಜ್ಯದ ಬಂಕಾದ ಛತ್ರಪಾಲ್ ನಲ್ಲಿ ವ್ಯಕ್ತಿ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿದ್ದಾನೆ.

ಹೀರ್​ಮೋತಿ ಗ್ರಾಮದ ದಿಲೇಶ್ವರ್ ದರ್ವೆ ಹಾಗೂ ಗೀತಾ ದೇವಿ ದಂಪತಿ ತಮ್ಮ ಮಗಳನ್ನು ಸಿಕಂದರ್ ಯಾದವ್​ಗೆ ಕೊಟ್ಟು ಈ ದಂಪತಿ ಮದುವೆ ಮಾಡಿದ್ದರು. ಕೆಲವು ಕಾರಣಗಳಿಂದ ಪತ್ನಿ ಮೃತಪಟ್ಟು, ನಂತರ ಅಳಿಯ ಅತ್ತೆ ಮನೆಯಲ್ಲೇ ಇದ್ದ ಎನ್ನಲಾಗಿದೆ.

ಅಳಿಯ, ಅತ್ತೆ ಮನೆಯಲ್ಲಿ ಇರುವುದರಿಂದ ಇಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿ ಮೂಡಿರುತ್ತದೆ. ಈ ಬಗ್ಗೆ ಮಾವ ದಿಲೇಶ್ವರ್ ದರ್ವೆಗೆ ಇವರಿಬ್ಬರ ಬಗ್ಗೆ ಅನುಮಾನ ಬಂದಿದ್ದರು, ಕೇಳೋಕೆ ಹೋಗಿರಲಿಲ್ಲ.

ನಂತರ ಗಂಡ ಹಾಗೂ ಗ್ರಾಮದ ಹಿರಿಯರ ಒಪ್ಪಿಗೆಯ ಮೇರೆಗೆ ಇಬ್ಬರು ಎಲ್ಲರ ಸಮ್ಮುಖದಲ್ಲಿ ಆಕೆಯ ಪತಿ ಕಾನೂನು ಪ್ರಕಾರ ಮದುವೆಯನ್ನು ಮಾಡಿಸಿದ್ದಾರೆ.