Sunday, 15th December 2024

ಜ.1ರಿಂದ ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿ ಕಡ್ಡಾಯ

ವದೆಹಲಿ: ಚೀನಾ, ಸಿಂಗಾಪುರ, ಹಾಂಕಾಂಗ್‌, ಕೊರಿಯಾ, ಥಾಯ್ಲೆಂಡ್‌ ಮತ್ತು ಜಪಾನ್‌ ನಿಂದ ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಜ.1ರಿಂದ ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿ ಕಡ್ಡಾಯವಾಗಿದೆ.

ಪರೀಕ್ಷೆಯ ನೆಗೆಟಿವ್‌ ವರದಿಯ ಬಗ್ಗೆ ಏರ್‌ ಸುವಿಧಾ ಪೋರ್ಟಲ್‌ ಮೂಲಕ ಸ್ವಯಂ ಘೋಷಣೆಯ ಅರ್ಜಿಯನ್ನು ಸಲ್ಲಿಸಿದ ನಂತರವಷ್ಟೇ ಚೆಕ್‌ ಇನ್‌ ಸಮಯದಲ್ಲಿ ಬೋರ್ಡಿಂಗ್‌ ಪಾಸ್‌ ವಿತರಿಸುವಂತೆ ಎಲ್ಲಾ ಏರ್‌ಲೈನ್ಸ್‌ಗಳಿಗೆ ಸೂಚಿಸಲಾಗಿದೆ.

ಪ್ರಯಾಣ ಆರಂಭಿಸುವ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್‌ ಪರೀಕ್ಷೆ ವರದಿ ಮಾತ್ರ ಮಾನ್ಯವಾಗಲಿದೆ.

ಭಾರತದಂತೆ ಯುಕೆ, ಫ್ರಾನ್ಸ್‌, ಸ್ಪೇನ್‌ ಸರ್ಕಾರಗಳು ಕೂಡ ಚೀನಾದಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿ ಕಡ್ಡಾಯ ಮಾಡಿವೆ. ಇನ್ನೊಂದೆಡೆ, ಕರೋನಾ ಪ್ರಕರಣ ಗಳ ಬಗ್ಗೆ ನೈಜ ವರದಿಯನ್ನು ಪ್ರತಿದಿನ ಬಿಡುಗಡೆ ಮಾಡುವಂತೆ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

Read E-Paper click here