Wednesday, 27th November 2024

80.62 ಕ್ಕೆ ಕುಸಿದ ರೂಪಾಯಿ ಮೌಲ್ಯ

ವದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 80.62 ಕ್ಕೆ ಕುಸಿಯಿತು.

ಕಳೆದ ಬುಧವಾರ 79.97 ರೂ.ಗೆ ವಹಿವಾಟು ಮುಕ್ತಾಯಗೊಳಿಸಿತ್ತು.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರವನ್ನು 0.75% ಏರಿಸಿದ ಬಳಿಕ ಡಾಲರ್‌ ಎದುರು ಹಲವು ಕರೆನ್ಸಿಗಳು ಮತ್ತಷ್ಟು ಮೌಲ್ಯ ಕುಸಿತ ದಾಖಲಿಸಿವೆ.

ಈ ಹಿಂದೆ ಡಾಲರ್‌ 80.12ರೂ.ಗೆ ಕುಸಿದಿತ್ತು. ಅಮೆರಿಕದ ಡಾಲರ್‌ ಇಂಡೆಕ್ಸ್‌ ಕಳೆದ ಇಪ್ಪತ್ತು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 313 ಅಂಕ ಕುಸಿಯಿತು. 59,130ಕ್ಕೆ ಇಳಿಯಿತು. ನಿಫ್ಟಿ 99.20 ಅಂಕ ಕಳೆದುಕೊಂಡು 17,619ಕ್ಕೆ ವಹಿವಾಟು ಮುಕ್ತಾಯಗೊಳಿಸಿತು.