ತಿರುವನಂತಪುರಂ: ಎರಡು ತಿಂಗಳ ಕಾಲ ನಡೆಯುವ ಮಂಡಲ- ಮಕರವಿಳಕ್ಕು (ಮಕರ ಸಂಕ್ರಾಂತಿ) ಉತ್ಸವಕ್ಕಾಗಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನ ಸೋಮವಾರದಿಂದ ಮತ್ತೆ ತೆರೆಯಲಿದೆ.
ಅಯ್ಯಪ್ಪನಿಗೆ ಸಮರ್ಪಿತವಾದ ಬೆಟ್ಟದ ದೇಗುಲ ತೆರೆಯಲಿದ್ದು, ಮಂಗಳವಾರ ದಿಂದ ಭಕ್ತರ ಪೂಜೆಗೆ ಅವಕಾಶ ನೀಡಲಾಗು ವುದು. ಮಂಡಲ ಪೂಜೆಗಾಗಿ ದೇವಸ್ಥಾನವನ್ನು ಡಿಸೆಂಬರ್ 26ರವರೆಗೆ ತೆರೆದಿದ್ದು, ಉತ್ಸವಕ್ಕಾಗಿ ಡಿಸೆಂಬರ್ 30 ರಂದು ಮತ್ತೆ ತೆರೆಯಲಿದ್ದು, ಜನವರಿ 20 ರವರೆಗೆ ಭಕ್ತರಿಗೆ ದೇವಾಲಯದ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ನವೆಂಬರ್ 16ರಂದು ಮಾಲಾಧಾರಿಗಳ ಪಾದಯಾತ್ರೆ ಆರಂಭವಾಗಲಿದ್ದು, ಸೋಮವಾರ ಪ್ರಧಾನ ಅರ್ಚಕ ಕಂದರಾರು ಮಹೇಶ್ ಮೋಹನರಾರು ಅವರ ಉಪಸ್ಥಿತಿಯಲ್ಲಿ ನಿರ್ಗಮಿತ ಅರ್ಚಕ ವಿ.ಕೆ. ಜಯರಾಜ್ ಪೊಟ್ಟಿ ದೇವಾಲಯದ ಗರ್ಭಗುಡಿ ತೆರೆಯಲಿದ್ದಾರೆ.
ಶಬರಿಮಲೆ ಯಾತ್ರೆಗೆ ಪ್ರತಿ ದಿನ ತಲಾ 25 ಸಾವಿರ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸ ಲಾಗಿದೆ. ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳಲು ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡಿ ದ್ದಾರೆ.
ಜನರು ದೇಗುಲಕ್ಕೆ ಭೇಟಿ ನೀಡಲು ಬಯಸಿದರೆ ಪೂರ್ಣ ವ್ಯಾಕ್ಸಿನೇಷನ್ ಪ್ರಮಾಣಪತ್ರ ಅಥವಾ 72 ಗಂಟೆಗಳಿಗಿಂತ ಹಳೆಯದಾದ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಅಧಿಕಾರಿಗಳು ಒತ್ತಾಯಿಸಿದ್ದಾರೆ.