ನವೆಂಬರ್ 15ರಂದು ಬಿಡುಗಡೆ ಕಂಡ ವಿಕ್ರಾಂತ್ ಮಾಸ್ಸಿ (Vikrant Massey) ನಟನೆಯ ‘ದಿ ಸಾಬರಮತಿ ರಿಪೋರ್ಟ್’ (Sabarmati Report) ಎಲ್ಲ ಕಡೆಗಳಲ್ಲಿ ಸದ್ದು ಮಾಡುತ್ತಿದ್ದು, ಈ ಸಿನಿಮಾ ವಿಮರ್ಶಕರಿಂದ ಪಾಸಿಟಿವ್ ಪ್ರತಿಕ್ರಿಯೆಯನ್ನೂ ಪಡೆದಿದೆ. ಈ ಚಿತ್ರದಲ್ಲಿ ರಾಶಿ ಖನ್ನಾ, ರಿದ್ಧಿ ಡೋಗ್ರಾ ಮೊದಲಾದವರು ನಟಿಸಿದ್ದಾರೆ. ಧೀರಜ್ ಶರ್ಮಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದು, ಏಕ್ತಾ ಕಪೂರ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಇದೀಗ ಈ ಚಿತ್ರದ ನಟ ವಿಕ್ರಾಂತ್ ಮಾಸ್ಸೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಭೇಟಿಯಾಗಿದ್ದು, ಸ್ವತಃ ಸಿಎಂ ಯೋಗಿ ಆದಿತ್ಯನಾಥ್ ಅವರೇ ಟ್ವಿಟರ್ ನಲ್ಲಿ ಮಾಸ್ಸೆ ಅವರನ್ನು ಭೇಟಿ ಮಾಡಿರುವುದರ ಬಗ್ಗೆ ಪೋಸ್ಟ್ ಹಾಕಿದ್ದಾರೆ.
ಇನ್ನು ಅದೇ ಚಿತ್ರವನ್ನು ನಟ ವಿಕ್ರಾಂತ್ ಮಾಸ್ಸೆ ಕೂಡ ಅವರ ಇನ್ ಸ್ಟಾಗ್ರಾಂ ಪೇಜ್ ಅಲ್ಲಿ ಹಂಚಿಕೊಂಡಿದ್ದು, ಸಿಎಂ ಯೋಗಿ ಆದಿತ್ಯನಾಥ್ ಅವರು ಚಿತ್ರದ ಕುರಿತು ಪ್ರಶಂಸೆ ಮಾತುಗಳನ್ನಾಡಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಮತ್ತು ಸ್ಪೂರ್ತಿ ದೊರಕಿದಂತಾಗಿದ್ದು, ಸಿಎಂ ಭೇಟಿಯಾಗಿದ್ದರ ಕುರಿತು ಖುಷಿಯನ್ನು ಹಂಚಿಕೊಂಡಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆಯಷ್ಟೇ ‘ದಿ ಸಬರಮತಿ ರಿಪೋರ್ಟ್’ (The Sabaramati Report) ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಶ್ಲಾಘಿಸಿದ್ದರು. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿನ ಪೋಸ್ಟ್ ಮೂಲಕ ಪ್ರಧಾನಿಯವರು (PM Modi) ಈ ಸಬರಮತಿ ರಿಪೋರ್ಟ್ ಸಿನಿಮಾವನ್ನು ಹೊಗಳಿದ್ದು, ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದರು.
ಚಿತ್ರದ ಕುರಿತು ಮಾತಾನಾಡಿದ ಮೋದಿ , ದುರಂತವೊಂದರ ಬಗ್ಗೆ ಕಥೆಯನ್ನ ಹೆಣೆದು ರೂಪಿಸಿರುವ ಸಿನಿಮಾನೇ ‘ದಿ ಸಬರಮತಿ ರಿಪೋರ್ಟ್‘. ಸದ್ಯ ರಿಲೀಸ್ ಆಗಿ 2 ದಿನ ಕಳೆಯುತ್ತಿದ್ದಂತೆ ಸಬರಮತಿ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಇದೀಗ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎಕ್ಸ್ ಪೋಸ್ಟ್ನಲ್ಲಿಯೂ ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಇನ್ನು ಪ್ರಧಾನಿ ಮೋದಿ, ” ತುಂಬಾ ಚೆನ್ನಾಗಿ ಹೇಳಿದ್ದೀರಿ. ಈ ರೀತಿಯ ಸತ್ಯ ಹೊರಬರುತ್ತಿರುವುದು ತುಂಬಾ ಒಳ್ಳೆಯದು, ಅದೂ ಕೂಡ ಜನಸಾಮಾನ್ಯರು ನೋಡುವಂತಹ ರೀತಿಯಲ್ಲಿದೆ. ಒಂದು ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಹಾಗೇ ಇರುತ್ತದೆ. ಕೊನೆಯದಾಗಿ, ಸತ್ಯ ಅನ್ನೋದು ಒಂದು ದಿನ ಹೊರಬರುತ್ತವೆ!” ಎಂದು ಬರೆದುಕೊಂಡಿದ್ದರು.
ಮೋದಿ ಟ್ವಿಟ್ಗೆ ವಿಕ್ರಾಂತ್ ನಮನ
‘ಗೌರವಾನ್ವಿತ ಪ್ರಧಾನಮಂತ್ರಿಗಳೇ, ದಿ ಸಾಬರಮತಿ ರಿಪೋರ್ಟ್ ಸಿನಿಮಾಕ್ಕೆ ನಿಮ್ಮ ಸ್ಪೂರ್ತಿದಾಯಕ ಮತ್ತು ಪಾಸಿಟಿವ್ ಮಾತುಗಳಿಗೆ ಧನ್ಯವಾದಗಳು. ನಿಮ್ಮ ಈ ಮೆಚ್ಚುಗೆಯು, ನಾವು ಸರಿಯಾದ ದಿಕ್ಕಿನಲ್ಲಿದ್ದೇವೆ ಎಂಬುದನ್ನು ಸಾಬೀತುಪಡಿಸುತ್ತದೆ. ಈ ಎಲ್ಲ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು” ಎಂದಿದ್ದಾರೆ ವಿಕ್ರಾಂತ್. “ಇತಿಹಾಸವು ಇದಕ್ಕೆ ಸಾಕ್ಷಿಯಾಗಿದೆ. ಅದು ದೇಶವಾಗಲಿ ಅಥವಾ ವ್ಯಕ್ತಿಯಾಗಲಿ, ಬಿದ್ದ ನಂತರವೇ ಒಬ್ಬರು ಚೇತರಿಸಿಕೊಳ್ಳುತ್ತಾರೆ. ಸುಳ್ಳಿನ ಕಾಲ ಎಷ್ಟೇ ಸುದೀರ್ಘವಾದರೂ, ಸತ್ಯ ಮಾತ್ರ ಅದನ್ನು ಬದಲಾಯಿಸಬಲ್ಲದು” ಎಂದಿದ್ದಾರೆ ವಿಕ್ರಾಂತ್.
ಇದನ್ನೂ ಓದಿ: Viral Video: ಬೆಂಗಳೂರಿನ ನಡು ರಸ್ತೆಯಲ್ಲೇ ʼಹುಡುಗರʼ ವ್ಹೀಲಿಂಗ್ ಹುಚ್ಚಾಟ – ಗದರಿಸಿದವರನ್ನೇ ಗುರಾಯಿಸಿದ ಪಡ್ಡೆಗಳು!
2002, ಫೆಬ್ರವರಿ 27ರಂದು ದುರಂತ ಘಟನೆಯೊಂದರ ಕಥೆಯನ್ನಾಧರಿಸಿ ರಚಿಸಿದ ಚಿತ್ರ ಇದಾಗಿದ್ದು, ವಿಕ್ರಾಂತ್ ಮಾಸ್ಸಿ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಅವರು ಈ ದಿ ಸಬರಮತಿ ರಿಪೋರ್ಟ್ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷವಾಗಿ ವಿಕ್ರಾಂತ್ ಮಾಸ್ಸಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾರೀ ಅದ್ಭುತವಾಗಿ ತನ್ನ ಪಾತ್ರವನ್ನು ನಿಭಾಯಿಸಿದ್ದಾರೆ. ಇನ್ನು ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ವಿಕಿರ್ ಫಿಲ್ಮ್ಸ್ ಪ್ರೊಡಕ್ಷನ್ ಪ್ರೆಸೆಂಟ್ಸ್ ಮಾಡಿದ್ದು, ಧೀರಜ್ ಸರ್ನಾ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
15 ನವೆಂಬರ್ 2024ರಲ್ಲಿ ರಿಲೀಸ್ ಆದ ‘ದಿ ಸಬರಮತಿ ರಿಪೋರ್ಟ್‘ ಮೂವಿ ರಿಲೀಸ್ಗೂ ಮೊದಲು ಭಾರೀ ವಿವಾದಕ್ಕೂ ಕಾರಣವಾಗಿತ್ತು. ಆದ್ರೆ ರಿಲೀಸ್ ಆದ ಬೆನ್ನಲ್ಲೇ ಉತ್ತಮ ಪ್ರತಿಕ್ರಿಯೆಗಳೂ ಬರುತ್ತಿದ್ದು, ಸದ್ಯ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಈ ಸಿನಿಮಾ ನಾಲ್ಕು ದಿನಗಳಲ್ಲಿ 7 ಕೋಟಿ ರೂಪಾಯಿ ಬಾಚಿಕೊಂಡಿದ್ದು, ಇದು ‘ದಿ ಕಾಶ್ಮೀರ್ ಫೈಲ್ಸ್’ ರೀತಿಯ ಗಳಿಕೆ ಮಾಡುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.